ಅಜ್ಜಿಗೆ ಫೋನ್ ಮಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆಗೈದ ಮುಖ್ಯ ಶಿಕ್ಷಕ – ವಿಡಿಯೋ ವೈರಲ್!​​

ಚಿತ್ರದುರ್ಗ : ವಿದ್ಯಾರ್ಥಿಗೆ ಮುಖ್ಯಶಿಕ್ಷಕ ಮನಸೋ ಇಚ್ಛೆ ಥಳಿಸಿರುವ ಘಟನೆ ಚಿತ್ರದುರ್ಗದ ನಾಯಕನಹಟ್ಟಿ ಪಟ್ಟಣದ ಶಾಲೆಯಲ್ಲಿ ನಡೆದಿದೆ. ಇದೀಗ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ತರುಣ್​​ ಎಂಬ ವಿದ್ಯಾರ್ಥಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವೀರಶೈವ ಸಂಸ್ಕೃತ ಹಾಗೂ ವೇದ ವಸತಿ ಶಾಲೆ ಮುಖ್ಯ ಶಿಕ್ಷಕ ಟಿ.ವಿರೇಶ್ ಮನಬಂದಂತೆ ಹಲ್ಲೆ ಮಾಡಿದ್ದಾನೆ. ವಿದ್ಯಾರ್ಥಿ ತನ್ನ ಅಜ್ಜಿಗೆ ಫೋನ್ ಮಾಡಿದ್ದನ್ನ ಪ್ರಶ್ನಿಸಿ ಶಿಕ್ಷಕ ಹಲ್ಲೆ ನಡೆಸಿದ್ದಾನೆ.

ಶಿಕ್ಷಕ ವೀರೇಶ್, ವಿದ್ಯಾರ್ಥಿಯನ್ನ ನೆಲಕ್ಕೆ ಕೆಡವಿ ಕಾಲಿನಲ್ಲಿ ಒದ್ದು ಹಲ್ಲೆ ನಡೆಸಿದ್ದು, ವಿದ್ಯಾರ್ಥಿ ಬೇಡ ಗುರೂಜಿ ಎಂದು ಕೇಳಿದರು ಹೊಡೆಯುವುದನ್ನು ನಿಲ್ಲಿಸದೆ ಶಿಕ್ಷಕ ಕ್ರೌರ್ಯ ಮೆರೆದಿದ್ದಾನೆ. ಈ ಸಂಬಂಧ ಶಿಕ್ಷಕ ವೀರೇಶ್ ವಿರುದ್ಧ ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ – ಬಾಲಕ ಸೇರಿ ಇಬ್ಬರ ಕಣ್ಣಿಗೆ ಗಾಯ!

 

Btv Kannada
Author: Btv Kannada

Read More