ಬೆಂಗಳೂರು : ಓಲಾ ಕಂಪನಿ ಸಿಬ್ಬಂದಿ ಅನಾಮಾನಸ್ಪದ ಸಾವು ಪ್ರಕರಣ ಸಂಬಂಧ ಓಲಾ ಎಲೆಕ್ಟ್ರಿಕ್ ಕಂಪನಿ ಹೆಡ್ ಸುಬ್ರತ್ ಕುಮಾರ್ ದಾಸ್ ವಿರುದ್ಧ FIR ದಾಖಲಾಗಿದೆ.

ಸೆಪ್ಟೆಂಬರ್ 28ರಂದು ಓಲಾ ಕಂಪನಿ ಸಿಬ್ಬಂದಿ ಅರವಿಂದ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಸಂಬಂಧ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದರು. ನಂತರ ಆತನ ರೂಂನಲ್ಲಿ 28 ಪುಟದ ಡೆತ್ ನೋಟ್ ಸಿಕ್ಕಿತ್ತು. ಈ ಡೆತ್ನೋಟಲ್ಲಿ ಸುಬ್ರತ್ ಸೇರಿದಂತೆ 3 ಜನರು ಕೆಲಸದ ಸ್ಥಳದಲ್ಲಿ ಕಿರುಕುಳ ನೀಡ್ತಿದ್ದಾರೆಂದು ಉಲ್ಲೇಖವಾಗಿತ್ತು.
ವೇತನ, ಭತ್ಯೆಯನ್ನ ನಿಲ್ಲಿಸಿ ಕೆಲಸದಲ್ಲಿ ಒತ್ತಡ ಹಾಕ್ತಿದ್ದಾರೆ. ಸುಖಾಸುಮ್ಮನೆ ಖ್ಯಾತೆ ತೆಗೆದು ಮಾನಸಿಕ ಹಿಂಸೆ ಕೊಡುತ್ತಿದ್ದಾರೆಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ. ಅರವಿಂದ್ ಸಾವಿನ ಬಳಿಕ ಅವರ ಖಾತೆಗೆ ಕಂಪನಿ 17 ಲಕ್ಷ ಹಣ ಹಾಕಿದೆ. ಸಾವಿನ ಬಳಿಕ ಹಣ ಹಾಕಿದ್ದರಿಂದ ಸಾಕಷ್ಟು ಅನುಮಾನಗಳು ಉಂಟಾಗಿ, ಅರವಿಂದ್ ಸಹೋದರ ಅಶ್ವಿನ್ ಕಣ್ಣನ್ ದೂರು ನೀಡಿದ್ದಾರೆ.

ಕಂಪನಿಯ ಹಣಕಾಸಿನ ವಿಚಾರಗಳ ತಪ್ಪನ್ನು ಮರೆ ಮಾಚುವ ಹಿನ್ನಲೆ ತನ್ನ ತಮ್ಮನ ಮೇಲೆ ದೂರನ್ನ ಹಾಕಿ ಮರೆ ಮಾಚಲು ಯತ್ನಿಸಿದ್ದಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅಶ್ವಿನ್ ಕಣ್ಣನ್ ಮನವಿ ಮಾಡಿದ್ದು, ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾರೀ ನೂಕು ನುಗ್ಗಲು – 11ಕ್ಕೂ ಹೆಚ್ಚು ಜನ ಅಸ್ವಸ್ಥ!







