ಬೆಂಗಳೂರು : ನಾಡಿನಾದ್ಯಂತ ದೀಪಾವಳಿ ಸಂಭ್ರಮಮನೆ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ನರಕ ಚತುರ್ದಶಿ, ಬಲಿ ಪಾಡ್ಯಮಿ ಆಚರಿಸಲು, ಹೂ ಹಣ್ಣು ಕಾಯಿ, ತೋರಣ ಸೇರಿದಂತೆ ಎಲ್ಲ ವಸ್ತುಗಳ ದರ ಗಗನಕ್ಕೇರಿದ್ದರು ಸಹ ಕ್ಯಾರೇ ಎನ್ನದ ಜನರು ಅವುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಗಾಂಧಿ ಬಜಾರ್, ಹುಸ್ಕೂರು ಮಾರುಕಟ್ಟೆ, ಕಲಾಸಿ ಪಾಳ್ಯ ಮಾರುಕಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ಖರೀದಿ ಭರಾಟೆಯಿಂದಾಗಿ ಮಾರುಕಟ್ಟೆ ರಸ್ತೆ ಮತ್ತು ಅದರ ಸುತ್ತಮುತ್ತ ಪ್ರದೇಶದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ.
ಇನ್ನು ಸತತ ಮಳೆ ಹಿನ್ನೆಲೆ ಹೂಗಳ ಬೆಲೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ, ಚೆಂಡು ಹೂಗಳ ಖರೀದಿ ಜೋರಾಗಿದೆ.
ಯಾವ ಹೂವಿಗೆ ಎಷ್ಟು ದರ?
- ಕನಕಾಂಬರ – 1,300-1,600 ರೂ.
- ಮಲ್ಲಿಗೆ, ಮಳ್ಳೆ ಹೂವು – 700-900 ರೂ.
- ಕಾಕಡ ಹೂವು – 700-800 ರೂ.
- ಸೇವಂತಿಗೆ – 800 ರೂ.
- ಗುಲಾಬಿ – 500 ರೂ.
- ಕಣಗಲೆ – 500 ರೂ.
- ಸುಗಂಧರಾಜ – 500 ರೂ.
- ತಾವರೆ ಹೂವು (ಜೋಡಿ) – 150 ರೂ.
- ಬಾಳೆಕಂದು – 150 ರೂ.
ಇದನ್ನೂ ಓದಿ : ಅಕ್ಟೋಬರ್ 31ರವರೆಗೂ ಜಾತಿ ಗಣತಿ ಸಮೀಕ್ಷೆ ವಿಸ್ತರಣೆ – ಸಿಎಂ ಸಿದ್ದು ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ!
Author: Btv Kannada
Post Views: 201







