ಬಿಗ್​ಬಾಸ್​ಗೆ ವೈಲ್ಡ್‌ ಕಾರ್ಡ್ ಎಂಟ್ರಿ – ಪ್ರೋಮೋ ರಿಲೀಸ್.. ದೊಡ್ಮನೆಗೆ ಬರ್ತಿರೋ 3 ಸ್ಪರ್ಧಿಗಳು ಯಾರು?

ಬೆಂಗಳೂರು : ಎಕ್ಸ್‌ಪೆಕ್ಟ್‌ ದಿ ಅನ್‌ಎಕ್ಸ್‌ಪೆಕ್ಟೆಡ್ ಥೀಮ್‌ನೊಂದಿಗೆ ಸಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಈಗ ಮತ್ತೊಂದು ಬಿಗ್ ಟ್ವಿಸ್ಟ್‌ ಎದುರಾಗಿದೆ. ನಿನ್ನೆಯಷ್ಟೇ ನಡೆದ ವೀಕೆಂಡ್ ಎಪಿಸೋಡ್​ನಲ್ಲಿ ಇಬ್ಬರು ಸ್ಪರ್ಧಿಗಳಾದ ಮಂಜುಭಾಷಿಣಿ ಮತ್ತು ಅಶ್ವಿನಿ ಎಸ್‌ಎನ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇಂದು ಬಿಗ್‌ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ಈ ಮೂವರು ಯಾರು ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಆಗಿದೆ.

ಮೊದಲ ಮಿಡ್-ಸೀಸನ್ ಫಿನಾಲೆ ಮತ್ತು ಡಬಲ್ ಎಲಿಮಿನೇಷನ್‌ನ ಬಿಸಿ ಇರುವಾಗಲೇ, ದೊಡ್ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಏಂಟ್ರಿ ಕೊಟ್ಟಿದ್ದಾರೆ. ಇಂದಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಿದ್ದು, ಈಗಾಗಲೇ ಅವರು ದೊಡ್ಮೆನೆಗೆ ಎಂಟ್ರಿ ಕೊಟ್ಟಾಗಿದೆ. ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಶೋನಲ್ಲಿ ಆ ಮೂವರು ಸ್ಪರ್ಧಿಗಳು ಯಾರು ಅನ್ನೋದು ರಿವೀಲ್ ಆಗಲಿದೆ. ಆದರೆ ಈಗಾಗಲೇ ವೀಕ್ಷಕರು ಆ ಮೂವರು ಯಾರು ಅನ್ನೋದನ್ನು ಗೆಸ್ ಮಾಡಿದ್ದಾರೆ.

ಹೌದು.. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಮೂವರ ಪೈಕಿ ಒಬ್ಬರು ಯಾರೆಂದರೆ, ‘ಕ್ವಾಟ್ಲೆ ಕಿಚನ್’ ರಾಘು’. ಇತ್ತೀಚೆಗೆ ಕ್ವಾಟ್ಲೆ ಕಿಚನ್ ಶೋ ಗೆದ್ದಿರುವ ರಾಘು ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಎಂದು ತಿಳಿದು ಬಂದಿದ್ದು, ಇಂದು ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಕೂಡ ಧ್ವನಿಯ ಪ್ರಕಾರ ಅದು ಅವರೇ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿ ಯಾರು ಅನ್ನೋದು ಕೂಡ ರಿವೀಲ್ ಆಗಿದ್ದು, ಕನ್ನಡದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ರಿಷಾ ಗೌಡ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೊಡಗು ಮೂಲದ ರಿಷಾ ಅವರು ‘ಕ್ರೇಜಿ ಕೀರ್ತಿ’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಧರ್ಮಕೀರ್ತಿರಾಜ್ ಅವರ ‘ಬೆಂಗಳೂರು ಇನ್’, ಪ್ರಮೋದ್ ಶೆಟ್ಟಿ ಅವರ ‘ಪರಾಕ್ರಮಿ’ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.

ಮೂರನೇ ವೈಲ್ಡ್ ಕಾರ್ಡ್ ಅಭ್ಯರ್ಥಿಯಾಗಿ ಕೆನಡಾದಲ್ಲಿರುವ ಫಿಟ್ನೆಸ್ ಮಾಡೆಲ್, ಬಾಡಿ ಬಿಲ್ಡರ್ ಸೂರಜ್ ಸಿಂಗ್ ಅವರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಫಿಟ್ ಆಂಡ್ ಫೈನ್ ಆಗಿರುವ ಸೂರಜ್ ಸಿಂಗ್ ಅವರ ವಿಶೇಷತೆ ಏನು ಅನ್ನೋದು ಸಂಜೆ ತಿಳಿದು ಬರಲಿದೆ. ಮೂಲಗಳ ಪ್ರಕಾರ ಮತ್ತು ಜನರು ಕಾಮೆಂಟ್‌ ಮಾಡುತ್ತಿರುವುದು ನೋಡಿದ್ರೆ ಈ ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಅನ್ನೋದು ಖಚಿತವಾಗಿದೆ.

ಇದನ್ನೂ ಓದಿ : ಕೊಬ್ಬಿನ ಮತ್ತು ದುರಹಂಕಾರದ ಜಾಹ್ನವಿ ಅವರನ್ನು ಬಿಗ್​ಬಾಸ್ ಇಂದ ಹೊರಹಾಕಿ!

Btv Kannada
Author: Btv Kannada

Read More