ಖ್ಯಾತ ನಟ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಜೆಸಿ’ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಒಂದು ಮಾಸ್ ರ್ಯಾಪ್ ಸಾಂಗ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ‘ಜೆಸಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಪ್ರಖ್ಯಾತ್, ದೊಡ್ಡ ಗ್ಯಾಪ್‌ನ ನಂತರ ಈ ಸಿನಿಮಾ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ. ನಾಯಕ ಪ್ರಖ್ಯಾತ್ ಬೈಕ್ ಏರಿ ಮಿಂಚಿರುವ ‘ವ್ರೂಮ್…ವ್ರೂಮ್…ರೋಡ್ ಮೇಲೆ ಬೀಸ್ಟ್ ಬಂತು ಸೈಡ್ ಕೊಡು…’ ಎಂಬ ರ್ಯಾಪ್ ಸಾಂಗ್ ಇದೀಗ ಬಿಡುಗಡೆಯಾಗಿದೆ.

ಖ್ಯಾತ ರ್ಯಾಪರ್‌ಗಳಾದ ಎಂ.ಸಿ. ಬಿಜ್ಜು ಮತ್ತು ರಾಹುಲ್ ಡಿಟ್ಟೋ ಅವರು ಈ ಹಾಡನ್ನು ಬರೆದು, ಸಂಗೀತ ನೀಡಿ, ಹಾಡಿರುವುದು ವಿಶೇಷ. ಈ ಹಾಡು ಕೇಳುಗರಿಗೆ ಸಿಕ್ಕಾಪಟ್ಟೆ ಮಜಾ ನೀಡುತ್ತಿದ್ದು, ಬೈಕ್ ಪ್ರಿಯರ ಮೆಚ್ಚಿನ ಗೀತೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಜೆಸಿ ಎಂದರೆ ‘ಜುಡಿಷಿಯಲ್ ಕಸ್ಟಡಿ’ ಎಂಬುದು ಈಗಾಗಲೇ ಗೊತ್ತಾಗಿದೆ. ಜೈಲಿನಿಂದ ಹೊರಬಂದ ಯುವಕನ ಸುತ್ತ ಹೆಣೆದ ಪಕ್ಕಾ ಮಾಸ್ ಕಥಾಹಂದರ ಈ ಚಿತ್ರದಲ್ಲಿದೆ.

ನಿರ್ದೇಶನ ಚೇತನ್ ಜೈರಾಮ್ (ಇವರಿಗೆ ಇದು ಮೊದಲ ಸಿನಿಮಾ), ತಾರಾಗಣ ಪ್ರಖ್ಯಾತ್ (ನಾಯಕ), ಬಾವನ (ನಾಯಕಿ), ಸಂಭಾಷಣೆ ಖ್ಯಾತ ಡೈಲಾಗ್ ರೈಟರ್ ಮಾಸ್ತಿ, ಛಾಯಾಗ್ರಹಣ ಕಾರ್ತಿಕ್, ಸಂಗೀತ ನಿರ್ದೇಶನ ರೋಹಿತ್ ಸೋವರ್. ಸದ್ಯ ಹಾಡಿನ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ‘ಜೆಸಿ’ ಚಿತ್ರತಂಡ, ಶೀಘ್ರದಲ್ಲೇ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನು ಓದಿ : ಆಭರಣ್ ಚಿನ್ನದ ಮಳಿಗೆಗೆ ಚಾಲನೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ – ಅಶ್ವಿನಿ ಪುನೀತ್ ರಾಜ್ಕುಮಾರ್!







