ಆಭರಣ್ ಚಿನ್ನದ ಮಳಿಗೆಗೆ ಚಾಲನೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ – ಅಶ್ವಿನಿ ಪುನೀತ್ ರಾಜ್​ಕುಮಾರ್!

ಬೆಂಗಳೂರು : ತೊಂಭತ್ತು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಜನಪ್ರಿಯ ಚಿನ್ನಾಭರಣ ಮಳಿಗೆ ‘ಆಭರಣ್ ಟೈಮ್‌ಲೆಸ್ ಜ್ಯುವೆಲರಿ’ಯು ನಗರದ ಜೆ.ಪಿ.ನಗರದಲ್ಲಿ ತನ್ನ ಹೊಸ ಶಾಖೆಯನ್ನು ಪ್ರಾರಂಭಿಸಿದೆ. ಈ ನೂತನ ಮಳಿಗೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಟಿ ಪ್ರಣೀತಾ ಸುಭಾಷ್ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರು ಚಾಲನೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಹೊಸ ಮಳಿಗೆಗೆ ಶುಭ ಹಾರೈಸಿದರು.

ಆಭರಣ್ ಸಂಸ್ಥೆಯ ಮಾಲೀಕರಾದ ಪ್ರತಾಪ್ ಮಧುಕರ ಕಾಮತ್ ಅವರು ಜೆ.ಪಿ.ನಗರದಲ್ಲಿ ಮತ್ತೊಂದು ಮಳಿಗೆಯನ್ನು ಆರಂಭಿಸಿದ್ದು, ಅವರ ಧರ್ಮಪತ್ನಿ ಪ್ರೀತಿ ಕಾಮತ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುಣಮಟ್ಟದ ಚಿನ್ನಾಭರಣಗಳಿಗೆ ಹೆಸರಾದ ‘ಆಭರಣ್’ ಹೊಸ ಶಾಖೆಯ ಮೂಲಕ ಗ್ರಾಹಕರಿಗೆ ಮತ್ತಷ್ಟು ಭರವಸೆ ತಂದಿದೆ.

ಇದನ್ನು ಓದಿ : ಡಾರ್ಲಿಂಗ್​ ಕೃಷ್ಣ-ಶಶಾಂಕ್​ ಕಾಂಬಿನೇಷನ್​ನ ‘ಬ್ರ್ಯಾಟ್’ ಟ್ರೈಲರ್​ ರಿಲೀಸ್ – ಕಿಚ್ಚ ಸುದೀಪ್ ಸಾಥ್!

Btv Kannada
Author: Btv Kannada

Read More