ಸ್ವಂತ ಖರ್ಚಲ್ಲಿ ಬೆಂಗಳೂರು ರಸ್ತೆಗಳ ದುರಸ್ತಿಗೆ ಮುಂದಾದ ಕಿರಣ್‌ ಮಜುಂದಾರ್‌ ಶಾ!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆ ಗುಂಡಿ, ಕಸ ವಿಲೇವಾರಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ, ಇದೀಗ ತಮ್ಮ ಸ್ವಂತ ಖರ್ಚಲ್ಲಿ ಬೆಂಗಳೂರು ರಸ್ತೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನ 10ಕ್ಕೂ ಹೆಚ್ಚು ರಸ್ತೆಗಳ ಅಭಿವೃದ್ಧಿ ಮಾಡಲು ಉದ್ಯಮಿ ಕಿರಣ್ ಮಜುಂದಾರ್ ಶಾ ಮುಂದೆ ಬಂದಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕು ವ್ಯಾಪ್ತಿಯ ಹೆಬ್ಬಗೋಡಿ ಭಾಗದ 10ಕ್ಕೂ ಅಧಿಕ ರಸ್ತೆಗಳನ್ನ ಉದ್ಯಮಿ ಕಿರಣ್ ಮಜುಂದಾರ್ ಅಭಿವೃದ್ಧಿಗೆ ಕೇಳಿದ್ದಾರೆ.

ನಗರದ ಹಾಳಾಗಿರುವ ರಸ್ತೆಗಳ ಬಗ್ಗೆ ಐಟಿ ದಿಗ್ಗಜರು ಒಬ್ಬೊಬ್ಬರಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರಲ್ಲಿ ಬಯೋಕಾನ್ ಸಂಸ್ಥೆಯ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಕೂಡ ಒಬ್ಬರು. ಆದ್ರೆ ಇದೀಗ ಕಿರಣ್ ಮಜುಂದಾರ್ ಶಾ ಅವರು ತಾನೇ ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ಅಭಿವೃದ್ಧಿ ಮಾಡುವುದಾಗಿ ಮುಂದೆ ಬಂದಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದ ‘RSS’ ಆದೇಶಕ್ಕೆ ಮೊದಲ ವಿಕೆಟ್ ಔಟ್ – RSS ಪಥ ಸಂಚಲನದಲ್ಲಿ ಭಾಗವಹಿಸಿದ್ದ PDO ಸಸ್ಪೆಂಡ್..!

Btv Kannada
Author: Btv Kannada

Read More