ಮೈಸೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಮೈಸೂರಿನಲ್ಲೂ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮೈಸೂರಿಗೆ ಎಸಿಪಿ ಆಗಿ ಬರಬೇಕಾದರೆ 1 ಕೋಟಿ ನೀಡಬೇಕಾಗಿದೆ ಎಂದು MLC ಎಚ್ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ MLC ಎಚ್ ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಇನ್ಸ್ಪೆಕ್ಟರ್ ಆಗಿ ಬರಲು 75 ಲಕ್ಷ, ಸಬ್ ಇನ್ಸ್ಪೆಕ್ಟರ್ ಆಗಿ ಬರಲು 50 ಲಕ್ಷ ಕೊಡಬೇಕು. ಪರಿಣಾಮ ರಾಜ್ಯದಲ್ಲಿ ಆಡಳಿತ ಯಂತ್ರ ಕಾನೂನು ಸುವ್ಯವಸ್ಥೆ ಕುಸಿದಿದೆ. ಈಗ ಕರ್ತವ್ಯ ನಿರ್ವಹಿಸುತ್ತಿರುವವರು ಸರ್ಕಾರಿ ಅಧಿಕಾರಿಗಳಲ್ಲ, ಎಲ್ಲಾ ಅಧಿಕಾರಿಗಳು ಶಾಸಕರ ಕೃಪ ಪೋಷಿತರು. ಶಾಸಕರು ಆಯಾಯ ಕ್ಷೇತ್ರಗಳ ಮಾಲೀಕರುಗಳಾಗಿದ್ದಾರೆ ಎಂದಿದ್ದಾರೆ.
ಸಿಕ್ಕ ಸಿಕ್ಕ ಕಡೆ ರೇಪ್ ಆಗ್ತಿವೆ, ಮಕ್ಕಳನ್ನು ಹೊತ್ತುಕೊಂಡು ಹೋಗುವ ಘಟನೆ ನಡೆಯುತ್ತಿವೆ, ಈ ಎಲ್ಲಾ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮಾಹಿತಿ ಇದ್ದರೂ ಕೇಳಲಾಗುತ್ತಿಲ್ಲ, ಏಕೆಂದರೆ ಅವರ ಪುತ್ರ ಯತೀಂದ್ರ ಹಾಗು ಆತನ ಸ್ನೇಹಿತರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ನಾಮಕಾವಸ್ಥೆಗೆ ಇದ್ದಾರೆ ಅಷ್ಟೇ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ಇದನ್ನೂ ಓದಿ : ‘ವೃಷಭ’ ಟೈಟಲ್ ಸಮಸ್ಯೆಯಿಂದ ಕನ್ನಡ ಚಿತ್ರಕ್ಕೆ ಸಂಕಷ್ಟ – ಫಿಲಂ ಚೇಂಬರ್ ಬಗೆಹರಿಸಬೇಕಿದೆ!







