ರಜನಿಕಾಂತ್ ನಟನೆಯ ʼಕೂಲಿʼ ಸಿನಿಮಾ ಕಿರುತೆರೆಗೆ ಎಂಟ್ರಿ – ಎಲ್ಲಿ, ಯಾವಾಗ?

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಕಾಲಿವುಡ್‌ ಚಿತ್ರ ‘ಕೂಲಿ’ ಸೂಪರ್ ಹಿಟ್ ಎನಿಸಿಕೊಂಡಿದೆ. ಇದೇ ಚಿತ್ರ ಒಟಿಟಿಯಲ್ಲೂ ತೆರೆ ಕಂಡಿದ್ದು ಅಲ್ಲಿಯೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಇದೀಗ ʼಕೂಲಿʼ ಸಿನಿಮಾ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಅ. 19ರಂದು 6 ಗಂಟೆಗೆ ಉದಯ ಟಿವಿಯಲ್ಲಿ ʼಕೂಲಿʼ ಚಿತ್ರ ಪ್ರಸಾರವಾಗಲಿದೆ.

ರಜನಿಕಾಂತ್ ಅಭಿನಯದ ʼಕೂಲಿʼ ಸಿನಿಮಾದಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಅಮೀರ್ ಖಾನ್, ಉಪೇಂದ್ರ, ಅಕ್ಕಿನೇನಿ‌ ನಾಗಾರ್ಜುನ್ ಸೇರಿದಂತೆ ಹಲವು ದಿಗ್ಗಜರು ಬಣ್ಣ ಹಚ್ಚಿದ್ದರು. ತಲೈವಾ ದೇವ ಪಾತ್ರದಲ್ಲಿ, ನಾಗಾರ್ಜುನ ಅಕ್ಕಿನೇನಿ ಸೈಮನ್ ಪಾತ್ರದಲ್ಲಿ, ಅಮೀರ್ ಖಾನ್ ದಹಾ ಹಾಗೂ ಉಪೇಂದ್ರ ಕಾಳೀಶನಾಗಿ ನಟಿಸಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾದಲ್ಲಿ ರಚಿತಾ ರಾಮ್, ಶ್ರುತಿ ಹಾಸನ್, ಸೌಬಿನ್ ಶಾಹಿರ್, ಸತ್ಯರಾಜ್ ಪ್ರಮುಖ ಪಾತ್ರ ಮಾಡಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ : ಸಿಎಂ, ಡಿಸಿಎಂ ಮನೆಗೆ RDX ಬಾಂಬ್ ಬೆದರಿಕೆ – ತಕ್ಷಣ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ!

Btv Kannada
Author: Btv Kannada

Read More