ಭಾವನಾ ಬೆಳಗೆರೆಯವರ “ಆಂಟಿ ನಿನ್ನೊಲುಮೆಯಿಂದಲೇ” ಪುಸ್ತಕ ರಿಲೀಸ್ – ರವಿ ಬೆಳಗೆರೆ ಪುತ್ರಿಗೆ ಗಣ್ಯರು ಸಾಥ್​​!

ಕನ್ನಡದ ಖ್ಯಾತ ಸಾಹಿತಿ, ಪತ್ರಕರ್ತ ರವಿ ಬೆಳಗೆರೆ ಅವರ ಪುತ್ರಿ ಭಾವನಾ ಬೆಳಗೆರೆ ಪುಸ್ತಕ ಬುಧವಾರ ಬಿಡುಗಡೆಯಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾಯದಲ್ಲಿ ಭಾವನಾ ಬೆಳಗೆರೆ ಖುಷಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಭಾವನಾ ಬೆಳಗೆರೆ, ಇಂದು ನನ್ನ ಜೀವನದ ಸಾರ್ಥಕ ದಿನ. ಮಳೆಯಲ್ಲಿ ಒದ್ದೆಯಾಗಿ ಕುಳಿತಿದ್ದ ಹಕ್ಕಿಯೊಂದು ಬಿರು ಬಿಸಿಲಿಗೆ ಮೈಕೊಡವಿ ಎದ್ದು ನಿಂತು ಮತ್ತೆ ಬಾನಲ್ಲಿ ಹಾರಾಡಿದಷ್ಟು ಸಂತಸ. ಕಾರಣ ಅಪ್ಪನಿಂದ ಪ್ರಾರಂಭವಾದ “ಆಂಟೀ ನಿನ್ನೊಲುಮೆಯಿಂದಲೇ” ಪುಸ್ತಕವನ್ನು ನಾನು ಯಶಸ್ವಿಯಾಗಿ ಪೂರ್ಣಗೊಳಿಸಿ 1000ಕ್ಕೂ ಹೆಚ್ಚು ಪ್ರೇಕ್ಷಕರು, ಅಭಿಮಾನಿಗಳು, ಕುಟುಂಬ ವರ್ಗ, ಕಾಲೇಜು ವಿದ್ಯಾರ್ಥಿಗಳೆದುರು ಮತ್ತು ಹಿರಿಯ ಸಾಹಿತಿಗಳು , ಗಣ್ಯರ ಕೈಯಿಂದ ನನ್ನ ಮೊಟ್ಟಮೊದಲ ಪುಸ್ತಕ ಬಿಡುಗಡೆಯಾಗಿದ್ದು. ಜೊತೆಗೆ ಅಪ್ಪನ ಕನಸ್ಸಿನ ಕೂಸು “ಹಾಯ್ ಬೆಂಗಳೂರ್! ” ಅಥವಾ ನಿಮ್ಮ ಪ್ರೀತಿಯ ಕಪ್ಪು ಸುಂದರಿಗೆ 31ನೇ ವಾರ್ಷಿಕೋತ್ಸವದ ಸಂಭ್ರಮ ಎಂದಿದ್ದಾರೆ.

ಇನ್ನು, ನಾನೇ ಓದಿದ ಎನ್ ಎಂ ಕೆ ಆರ್ ವಿ ಕಾಲೇಜಿನ ಸುಂದರ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆದದ್ದು ಇನ್ನೂ ಹೆಮ್ಮೆ ಮತ್ತು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ಹುಮ್ಮಸ್ಸಿನಲ್ಲೇ ಮುಂದಿನ ದಿನಗಳಲ್ಲಿ ಮತ್ತೊಂದು ಪುಸ್ತಕದ ಬರವಣಿಗೆಯ ತಯಾರಿಯಲ್ಲಿ ಮಾನಸಿಕವಾಗಿ ಮತ್ತೆ ಸಿದ್ಧವಾಗಿದ್ದೇನೆ. ಇದು ನನ್ನ ಅಪ್ಪನಿಗೆ ನಾನು ಅರ್ಪಿಸುವ ಪುಟ್ಟ ಪ್ರೀತಿಯ ಕಾಣಿಕೆ.

ಈ ವಿಶೇಷ ಸಮಾರಂಭದಲ್ಲಿ ಪಾಲ್ಗೊಂಡು ನನ್ನನ್ನು ಹಾರೈಸಿ ಆಶೀರ್ವದಿಸಿದ ಹಾಗೂ ಬೆನ್ನು ತಟ್ಟಿ ಬೆಂಬಲಿಸಿದ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಕವಿ ಸಾಹಿತಿ ಬಿ ಆರ್. ಲಕ್ಷ್ಮಣ್ ರಾವ್, ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್, ಸುವರ್ಣ ನ್ಯೂಸ್ ಚಾನೆಲ್ ಮುಖ್ಯ ಸಂಪಾದಕ ಅಜಿತ್ ಹನುಮಕ್ಕನವರ್, ಐಪಿಎಸ್ ಆಫೀಸರ್ DIG ರವಿ ಡಿ. ಚೆನ್ನಣ್ಣನವರ್ ,ನನ್ನ ಪ್ರೀತಿಯ ಕಿಟ್ಟಪ್ಪ ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್ ನ ಖ್ಯಾತ ನಿರೂಪಕಿ ಸ್ಮಿತಾ ರಂಗನಾಥ್, ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಆರ್ ಸುಚಿತ್ರಾ, ಕನ್ನಡ Rapper ಅಲೋಕ್(ALL OK), ಖ್ಯಾತ ಟಿವಿ ನಿರೂಪಕ ಹರೀಶ್ ನಾಗರಾಜು ಅವರ ನಿರೂಪಣೆಯಲ್ಲಿ ಹಾಗೂ ನನ್ನ ಪ್ರೀತಿಯ ಅಮ್ಮ , ಕುಟುಂಬ ವರ್ಗ, ನನ್ನ ಅಪ್ಪನ ಅಭಿಮಾನಿಗಳು ,ವಿದ್ಯಾರ್ಥಿಗಳು, ಇದಕ್ಕೆಲ್ಲ ಸಹಕರಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ಈ ಕಾರ್ಯಕ್ರಮ ನನ್ನ ಪರಿಶ್ರಮ ,ಸಾರ್ಥಕವಾಗುವುದು ಓದುಗರಾದ ನೀವು ಈ ಪುಸ್ತಕವನ್ನು ಕೊಂಡು ಓದಿದಾಗ ಮಾತ್ರ. ಹಾಗಾಗಿ ದಯವಿಟ್ಟು ನೀವೆಲ್ಲರೂ ಈ ಪುಸ್ತಕವನ್ನು ಕೊಂಡು ಓದಿ ಹರಸಿ, ಮಾತ್ರವಲ್ಲ ಖಾಸ್ ಬಾತ್ 7 ಮತ್ತು ಬಾಟಮ್ ಐಟಂ 10 ಅವುಗಳೂ ಇದೇ ವೇದಿಕೆಯಲ್ಲಿ ಬಿಡುಗಡೆಯಾಗಿದ್ದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದನ್ನು ಕೊಂಡು ಓದಿ ಹಾರೈಸಿ ಅಂತ ವಿನಂತಿಸಿಕೊಳ್ಳುತ್ತಾ, ಮತ್ತೊಂದು ಹೊಸ ಪುಸ್ತಕದ ಬರವಣಿಗೆಯ ತವಕದಲ್ಲಿರುವ ನಿಮ್ಮ ಪ್ರೀತಿಯ ಬಾನಿ ಎಂದು ಭಾವನಾ ಬೆಳಗೆರೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ದೀಪಾವಳಿಗೆ ಗುಡ್​ನ್ಯೂಸ್​ ಕೊಟ್ಟ KMF – ಸಕ್ಕರೆ ರಹಿತ ನಂದಿನಿ ಸ್ವೀಟ್ಸ್ ರಿಲೀಸ್!

Btv Kannada
Author: Btv Kannada

Read More