ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ – ವಿಡಿಯೋ ವೈರಲ್!

ಚಿತ್ರದುರ್ಗ : ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀರಿನ ಕ್ಯಾನ್​​ಗೆ ಎಣ್ಣೆ ಮಿಕ್ಸಿಂಗ್ ಮಾಡಿ ಸಿಬ್ಬಂದಿ ಕಚೇರಿಗೆ ತಂದಿದ್ದ, ಕಚೇರಿಯಲ್ಲೇ ಸಿಬ್ಬಂದಿ ಕುಡಿದು ಪಾರ್ಟಿ ಮಾಡಿದ್ದಾರೆ.

ಸಿಬ್ಬಂದಿಯೋರ್ವ ಕಾರು ಖರೀದಿ ಮಾಡಿದ ಪ್ರಯುಕ್ತ ಕಚೇರಿಯಲ್ಲೇ ಪಾರ್ಟಿ ಮಾಡಲಾಗಿದೆ. ಡಿಡಿಪಿಐ ಕಚೇರಿ ಆವರಣದಿಂದ ಎಣ್ಣೆ ಮಿಕ್ಸ್ ಮಾಡಿ ತೆರಳಿದ ವಿಡಿಯೋ ವೈರಲ್ ಆಗಿದ್ದು, ಶಿಕ್ಷಣ ಇಲಾಖೆ ಸಿಬ್ಬಂದಿ ಎಣ್ಣೆ ಪಾರ್ಟಿಗೆ ಸಾರ್ವಜನಿಕರು ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳ ಹಿಂದೆ ನಡೆದಿರುವ ಎಣ್ಣೆ ಪಾರ್ಟಿ ವಿಡಿಯೋ ಈಗ ವೈರಲ್ ಆಗಿದೆ.

ಈ ಸಂಬಂಧ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಪ್ರತಿಕ್ರಿಯಿಸಿ, ಕಾರು ಚಾಲಕ ಸೇರಿ ಐವರು ಡ್ರಿಕ್ಸ್ ಮಾಡಿದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಧೀಕ್ಷಕ ಸುನಿಲ್, FDA ಗಣೇಶ್, ಚಾಲಕ ರವಿ, ಡಿ ಗ್ರೂಪ್ ನೌಕರ ತಿಪ್ಪೇಸ್ವಾಮಿ ಸೇರಿದಂತೆ ಐವರನ್ನ ಸಸ್ಪೆಂಡ್ ಮಾಡಿ ಆದೇಶ ನೀಡಲಾಗಿದೆ. ನಡೆದ ತಪ್ಪಿನ ಬಗ್ಗೆ ಶೀಘ್ರವಾಗಿ ಕ್ರಮ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : ಧರ್ಮಂ‌ ಸಿನಿಮಾದ ಸಾಂಗ್ ಮೆಚ್ಚಿ ಚಿತ್ರತಂಡಕ್ಕೆ ಶುಭಹಾರೈಸಿದ ಆರ್. ಚಂದ್ರು!

Btv Kannada
Author: Btv Kannada

Read More