ಸರ್ಕಾರಿ ಕಾರ್ಯಕ್ರಮಕ್ಕೆ ಸ್ಥಳೀಯ MLA, MPನ ಕರಿಯದೇ ಅವಮಾನಿಸಿದ್ದಾರೆ – ಆರ್​.ಅಶೋಕ್ ಕಿಡಿ!

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮುನಿರತ್ನ ಹೈಡ್ರಾಮಾ ಸೃಷ್ಟಿಸಿದ್ದರು. ಜೆಪಿ ಪಾರ್ಕ್​ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕರನ್ನ ಕರೆದಿಲ್ಲ ಎಂದು ರಂಪಾಟ ಮಾಡಿದ್ದಾರೆ. ಈ ಸಂಬಂಧ ವಿಪಕ್ಷ ನಾಯಕ ಆರ್​.ಅಶೋಕ್​ ಪ್ರತಿಕ್ರಿಯಿಸಿ, ಲೋಕಲ್ MLA,MP ನ ಕರಿಯದೇ ಅವಮಾನ ಮಾಡಿದ್ದಾರೆ ಎಂದು ಕೆಂಡ ಕಾರಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್​.ಅಶೋಕ್ ಮಾತನಾಡಿ, ಶಾಸಕರಿಗೆ ಗೌರವ ಕೊಡದೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದು ಕಾಂಗ್ರೆಸ್​​ನ ಸಂಸ್ಕೃತಿ ಹಾಗೂ ಗೂಂಡಾಗಿರಿ ತೋರಿಸುತ್ತದೆ, 2 ವರ್ಷ ಮಾತ್ರ ಇರ್ತೀರ ಯಾಕೆ ಗೂಂಡಾಗಿರಿ ಮಾಡ್ತೀರಾ? ಕಾಂಗ್ರೆಸ್ ಔಟ್ ಗೋಯಿಂಗ್ ಪಾರ್ಟಿ ಅಂತ ಜನ ತೀರ್ಮಾನ ಮಾಡಿದ್ದಾರೆ ಎಂದು ಗುಡುಗಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ ಮಾಡೋದೆ ನಮ್ಮ ಅಜೆಂಡಾ, ಮುನಿರತ್ನ ಮೇಲೆ ಆಗಿರುಗ ಹಲ್ಲೆ ಪ್ರಜಾಪ್ರಭುತ್ವದ ಮೇಲೆ ಆಗಿರುವ ಹಲ್ಲೆ. ನಾವು ಮುನಿರತ್ನಗೆ ಬೆಂಬಲ ಕೊಡ್ತೀವಿ, ಪೊಲೀಸರು ಅವರಿಗೆ ರಕ್ಷಣೆ ಕೊಡ್ಬೇಕು ಎಂದು ಆರ್​.ಅಶೋಕ್​ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ 17 ಜನರನ್ನು ಬಲಿ ಪಡೆದ ಪಟಾಕಿ ಮಾರಾಟ ದಂಧೆ – ಕನ್ನಡಿಗರ ಹಣದಿಂದ ತಮಿಳುನಾಡಿನ ಸರ್ಕಾರಕ್ಕೆ 250 ಕೋಟಿ ಆದಾಯ!

Btv Kannada
Author: Btv Kannada

Read More