ನೆಲಮಂಗಲ : ಇಂದು ರಾಷ್ಟ್ರೀಯ ಅಂಚೆ ದಿನದ ಪ್ರಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲದಲ್ಲಿ ಇತಿಹಾಸ ಹಾಗೂ ಕನ್ನಡ ವಿಭಾಗಗಳ ಸಹಯೋಗದಲ್ಲಿ ಅಂಚೆಚೀಟಿ ಸಂಗ್ರಹ, ಪ್ರದರ್ಶನ ಸ್ಪರ್ಧೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸುಮಾರು 50 ವಿದ್ಯಾರ್ಥಿಗಳು 25 ವಿವಿಧ ಥೀಮ್ಗಳ ಅಂಚೆ ಚೀಟಿಗಳನ್ನು ಸಂಗ್ರಹಿಸಿ ಪ್ರದರ್ಶಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಜಾತ ಸಿ ಎನ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ರಂಗಸ್ವಾಮಿ ರವರು ಭಾರತೀಯ ಅಂಚೆ ಸೇವೆ ಬೆಳೆದು ಬಂದ ದಾರಿಯನ್ನು ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಧನಲಕ್ಷ್ಮಿ ಅವರು ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಹನುಮಂತರರಾಜು, ಡಾ. ನಾಗೇಂದ್ರ ಸ್ವಾಮಿ ಹಾಗೂ ಡಾ. ನಾಗೇಂದ್ರ ಕುಮಾರ್ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ : Btv ಬಿಗ್ ಇಂಪ್ಯಾಕ್ಟ್ – ಕೆಲಸದಿಂದ ವಜಾ ಮಾಡಿದ್ದ ಸಾಯಿ ವಿಜಯ ಪ್ರಗತಿ ಸ್ಟೀಲ್ ಕಂಪನಿಯ 28 ಕಾರ್ಮಿಕರು ಮತ್ತೆ ನೇಮಕ!







