ವಿಜಯನಗರ : ಹೊಸಪೇಟೆ ತಾಲೂಕಿನ ಹಾರುವನಹಳ್ಳಿ ಗ್ರಾಮದಲ್ಲಿರುವ ಸಾಯಿ ವಿಜಯ ಪ್ರಗತಿ ಸ್ಟೀಲ್ ಉದ್ಯೊಗ ಪ್ರೈ.ಲಿ.ಕಂಪನಿ ಇದ್ದಕ್ಕಿದ್ದಂತೆ 28 ಕಾರ್ಮಿಕರನ್ನ ತೆಗೆದು ಹಾಕಿತ್ತು. ಸ್ಥಳೀಯ ಕಾರ್ಮಿಕರನ್ನು ಉದ್ಯೋಗದಿಂದ ತೆಗೆದು ಹಾಕಿ ಹೊರ ರಾಜ್ಯದ ಕಾರ್ಮಿಕರನ್ನು ತೆಗೆದುಕೊಂಡಿದ್ದರು. ಈ ಬಗ್ಗೆ ಬಿಟಿವಿ ವರದಿ ಮಾಡಿತ್ತು. ಇದೀಗ ಬಿಟಿವಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ 28 ಕಾರ್ಮಿಕರನ್ನ ನೇಮಕ ಮಾಡಿಕೊಂಡಿದ್ದಾರೆ.

ಬಿಹಾರದಿಂದ ಕರೆತಂದಿದ್ದ ಕಾರ್ಮಿಕರನ್ನ ತೆರವು ಮಾಡಿ ಸಾಯಿ ವಿಜಯ ಪ್ರಗತಿ ಸ್ಟೀಲ್ ಉದ್ಯೊಗ ಪ್ರೈ.ಲಿ.ಕಂಪನಿಯು ಈಗ ಸ್ಥಳೀಯ ಕಾರ್ಮಿಕರ ನೇಮಕ ಮಾಡಿಕೊಂಡಿದೆ.

ಸ್ಥಳೀಯ ಕಾರ್ಮಿಕರಿಗೆ ಹೆಚ್ಚಿನ ಒತ್ತು ನೀಡ್ತೇವೆ, ಇನ್ನು ಮುಂದೆ ಈ ತಪ್ಪು ಆಗದಂತೆ ನೋಡಿಕೊಳ್ತೇವೆ ಎಂದು ಸಾಯಿ ವಿಜಯ ಪ್ರಗತಿ ಸ್ಟೀಲ್ ಉದ್ಯೊಗ ಪ್ರೈ.ಲಿ.ಕಂಪನಿಯ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ : ಹಾಸನಾಂಬ ದೇಗುಲದಲ್ಲಿ ಅಕ್ರಮ – ಇಬ್ಬರು ಅಧಿಕಾರಿಗಳು ಸಸ್ಪೆಂಡ್!
Author: Btv Kannada
Post Views: 433







