ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡುವ ಪುರಾಣ ಪ್ರಸಿದ್ದ ಹಾಸನಾಂಬೆ ಉತ್ಸವ ಅ.9ಕ್ಕೆ ಆರಂಭವಾಗಿದ್ದು, ಅ.23 ರವರೆಗೆ ನಡೆಯಲಿದೆ. ಹಾಸನಾಂಬೆ ದೇಗುಲದಲ್ಲಿ ಅಕ್ರಮ ಆರೋಪ ಕೇಳಿಬಂದಿದ್ದು, ಇದೀಗ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಹಾಸನ ಡಿಸಿ ಆದೇಶ ಹೊರಡಿಸಿದ್ದಾರೆ.
ದೊಡ್ಡಬೆಮ್ಮತ್ತಿ ಅರಕಲಗೂಡು ತಾಲೂಕಿನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಆನಂದ್ ಹಾಗೂ ಹಳೆಬೀಡು, ಬೇಲೂರು ತಾಲೂಕಿನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ರಮೇಶ್ನ್ನು ಸ್ವಚ್ಛತೆಯ ಮೇಲ್ವಿಚಾರಣೆಯ ಕರ್ತವ್ಯ ನಿರ್ವಹಣೆ ಮಾಡಲು ನಿಯೋಜಿಸಲಾಗಿತ್ತು. ಅವರಿಗೆ ಗುರುತಿನ ಚೀಟಿಯನ್ನು ವಿತರಿಸಲಾಗಿತ್ತು.

ಆದರೆ ಆನಂದ್ ಮತ್ತು ರಮೇಶ್ ತಮ್ಮ ಗುರುತಿನ ಚೀಟಿಯನ್ನು ಬೇರೆಯವರಿಗೆ ನೀಡಿ ಅನ್ಯ ವ್ಯಕ್ತಿಗಳು ದೇವಾಲಯದ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ. ಸರ್ಕಾರಿ ನೌಕರರಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದವರು ತಮ್ಮ ಅಧಿಕಾರ ಹಾಗೂ ನೀಡಿರುವ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪ ಎಸಗಿರುವುದರಿಂದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಮಾಡಲಾಗಿದೆ.
ಇದನ್ನೂ ಓದಿ : ಅನೀಶ್ ತೇಜೇಶ್ವರ್ ನಟನೆಯ “ಲವ್ OTP” ಚಿತ್ರದ ಟ್ರೈಲರ್ ರಿಲೀಸ್!







