ಮಂಡ್ಯ ಮಳೆ ಹಾನಿ ಪ್ರದೇಶಕ್ಕೆ ಕಾಂಗ್ರೆಸ್​ ನಾಯಕರ ಭೇಟಿ.. 41 ಕೋಟಿ ವೆಚ್ಚದ ಕಾಮಗಾರಿಗೆ ಶೀಘ್ರ ಟೆಂಡರ್ – ಸಚಿವ ಎನ್.ಚಲುವರಾಯಸ್ವಾಮಿ!

ಮಂಡ್ಯ : ಸಕ್ಕರೆ ನಾಡು ಮಂಡ್ಯ ಜಿಲ್ಲೆಯಾದ್ಯಂದ ಭಾರೀ ಮಳೆಯಾಗಿದೆ. ವರುಣ ಆರ್ಭಟಕ್ಕೆ ಕೃಷಿ ಬೆಳೆಗಳು ಕೊಚ್ಚಿ ಹೋಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಇದೀಗ ಮಳೆಯಿಂದಾಗಿ ಜಲಾವೃತವಾಗಿದ್ದ ಮಂಡ್ಯದ ಕೆರೆ ಅಂಗಳದಲ್ಲಿರುವ ಕೆ.ಹೆಚ್.ಬಿ. ಬಡಾವಣೆಗೆ ಸಚಿವ ಎನ್.ಚಲುವರಾಯಸ್ವಾಮಿ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಈ ವೇಳೆ ಶಾಸಕ ಗಣಿಗ ಪಿ.ರವಿಕುಮಾರ್‌, ಡಿಸಿ, ಎಸ್ಪಿ, ಸಿಇಓ, ಸಂಬಂಧಪಟ್ಟ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ.

ಈ ಬಗ್ಗೆ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಕಳೆದ ಒಂದು ತಿಂಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಳೆಯಿಂದ ಬೆಳೆ ಹಾನಿ ಆಗಿದೆ‌.
ಸಿಎಂ ಜೊತೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕೊಡಲು ತೀರ್ಮಾನ ಮಾಡಲಾಗಿದೆ. ಮಂಡ್ಯದಲ್ಲೂ ಭಾರೀ ಮಳೆಗೆ ಶ್ರೀರಂಗಪಟ್ಟಣ ದಸರಗುಪ್ಪೆ ಸೇರಿ ಹಲವೆಡೆ ಹಾನಿಯಾಗಿದೆ. ಕೆ.ಹೆಚ್.ಬಿ ಕಾಲೋನಿಗೂ ನೀರು ನುಗ್ಗಿದ್ದು, ಇಲ್ಲಿ ಶಾಸಕ ಗಣಿಗ ರವಿಕುಮಾರ್ ತಡೆಗೋಡೆ ನಿರ್ಮಿಸಿ ನೀರು ನುಗ್ಗುವುದು ತಪ್ಪಿದೆ‌. ಈಗ ಆಗಿರುವ ಹಾನಿಗೂ ತಡೆಗೋಡೆ ನಿರ್ಮಿಸಲು ಟೆಂಡರ್ ಕರೆಯಲಾಗಿದೆ, 41 ಕೋಟಿ ವೆಚ್ಚದ ಕಾಮಗಾರಿ ಮಾಡಲಾಗುತ್ತೆ ಎಂದಿದ್ದಾರೆ.

ಗಣಿಗ ರವಿಕುಮಾರ್ ಶಕ್ತಿ ಮೀರಿ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡ್ತಿದ್ದಾರೆ, ಮಳೆ ನಮ್ಮ ಕೈನಲ್ಲಿಲ್ಲ, ಪ್ರಕೃತಿ ವಿಕೋಪ ಸಮಸ್ಯೆ ಬರುತ್ತೆ. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸುತ್ತೇವೆ, ಇಡೀ ರಾಜ್ಯದಲ್ಲಿ 13ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 80 ಎಕರೆ ಬೆಳೆ ಹಾನಿಯಾಗಿದೆ. ನಾಲೆಗಳ ಅಭಿವೃದ್ಧಿ ಮಾಡಬೇಕಾದರೆ 3 ವರ್ಷ ಕಾಲುವೆ ನೀರು ನಿಲ್ಲಿಸಬೇಕು, ಅವಾಗ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ. ಶಾಶ್ವತವಾಗಿ ಪರಿಹಾರ ಸಿಗುತ್ತೆ, ಜನರು ಸಹ ಒಂದು ಬೆಳೆ ತಡೆದುಕೊಳ್ಳಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

2000 ಕೋಟಿ ವೆಚ್ಚ ಕಾವೇರಿ, ಹೇಮಾವತಿ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಮಂತ್ರಿ ಕೊಟ್ಟಿದ್ದಾರೆ. ಸಂಪೂರ್ಣವಾಗಿ ಸಮಸ್ಯೆ ಪರಿಹಾರಕ್ಕೆ ಸುಮಾರು 5ಸಾವಿರ ಕೋಟಿ ಮಂಜೂರು ಮಾಡಬೇಕಾಗುತ್ತೆ. ಮುಂದೆ ಅನುಕೂಲ ಆಗಬೇಕಾದರೆ ರೈತರು ಕನಿಷ್ಠ 2 ವರ್ಷ ಬೆಳೆ ನಿಲ್ಲಿಸಿ ರೈತರನ್ನ ಮನಹೋಲಿಸುವ ಪ್ರಯತ್ನ ಮಾಡ್ತೇವೆ. ಮಳೆ ಹಾನಿ ಪರಿಹಾರ ಕೊಡ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ‘ನೊಬೆಲ್‌ ಶಾಂತಿ ಪ್ರಶಸ್ತಿ’ಯನ್ನು ಡೊನಾಲ್ಡ್‌ ಟ್ರಂಪ್‌ಗೆ ಅರ್ಪಿಸಿದ ಮಚಾದೊ!

Btv Kannada
Author: Btv Kannada

Read More