ಬೆಂಗಳೂರು : ರಾಜ್ಯ ಸರ್ಕಾರದ 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿಯನ್ನು ನೇಮಕ ಮಾಡಲಾಗಿದೆ.

ಹಿರಿಯ ವಕೀಲರಾದ ಪ್ರೊ.ರವಿವರ್ಮ ಕುಮಾರ್, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಸಾಹಿತಿ ಸಬಿಹಾ ಭೂಮಿಗೌಡ ಸೇರಿದಂತೆ 63 ಮಂದಿ ಸಮಿತಿಯ ಸದಸ್ಯರಾಗಿದ್ದು, ಸಮಾಜ ಸೇವೆ ಕ್ಷೇತ್ರದಿಂದ ಮಾರುತಿ ಬೌದ್ದೆ, ಕೆ.ಪಿ. ಸುರೇಶ್, ಇ.ಟಿ. ರತ್ನಾಕರ್, ರವೀಶ್, ದು. ಸರಸ್ವತಿ, ಫಾದರ್ ಟಿಯೋಲ ಸದಸ್ಯರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಿಂದ ಡಾ. ಮಾಲತಿ ಪಟ್ಟಣಶೆಟ್ಟಿ ಪ್ರೊ. ಜಿ. ಅಬ್ದುಲ್ ಬಷೀರ್, ಚಂದ್ರಶೇಖರ ನಂಗ್ಲಿ, ಡಾ. ಎಂ.ಕೆ. ಮಾಸ್ಕೆರಿ ನಾಯಕ್, ಎಚ್.ಕೆ. ಸುಬ್ಬು ಹೊಲೇಯಾರ್, ಡಿ.ಬಿ. ರಜಿಯಾ, ಸಬಿಹಾ ಭೂಮಿಗೌಡ ಸದಸ್ಯರಾಗಿದ್ದಾರೆ.
ಕೃಷಿ ಕ್ಷೇತ್ರದಿಂದ ಸುನಂದ ಜಯರಾಂ, ನಾಗರತ್ನ ಪಾಟೀಲ್, ಎಚ್.ಕೆ. ಶ್ರೀಕಂಠು ಸದಸ್ಯರಾಗಿದ್ದರೆ,. ಜಾನಪದ ಕ್ಷೇತ್ರದಿಂದ ಸಿದ್ದಣ್ಣ ಜಕ್ಕಬಾಳ, ಪ್ರೊ. ಶಿವರಾಂ ಶೆಟ್ಟಿ, ಡಾ. ಅಪ್ಪಗೆರೆ ತಿಮ್ಮರಾಜು ಸದಸ್ಯ ರಾಗಿದ್ದಾರೆ. ರಂಗಭೂಮಿ ಕ್ಷೇತ್ರದಿಂದ ಶ್ರೀನಿವಾಸ ಜಿ. ಕಪ್ಪಣ್ಣ ಪ್ರೇಮಾ ಬಾದಾಮಿ ಮತ್ತು ಮಾಧ್ಯಮ ಕ್ಷೇತ್ರದಿಂದ ಅನಿಲ್ ಹೊಸಮನಿ, ಗಿರೀಶ್ ಬಾಬು ಸದಸ್ಯರಾಗಿದ್ದಾರೆ.
ಇನ್ನು ಧಾರವಾಡದ ಡಾ. ಸಂಜೀವ್ ಕುಲಕರ್ಣಿ ಸೇರಿ ವೈದ್ಯಕೀಯ ಕ್ಷೇತ್ರದಿಂದ ಮೂವರು, ಧಾರವಾಡದ ಡಾ. ಎಂ.ವೆಂಕಟೇಶ್ ಕುಮಾರ್ ಸೇರಿ ಸಂಗೀತ ಕ್ಷೇತ್ರದಿಂದ ಇಬ್ಬರು, ಶಿವಮೊಗ್ಗದ ಗೀತಾ ದಾತಾರ್ ಸೇರಿ ನೃತ್ಯದಿಂದ ಇಬ್ಬರು, ಧಾರವಾಡದ ವೆಂಕಟೇಶ ಮಾಚಕನೂರು ಸೇರಿ ಶಿಕ್ಷಣ ಕ್ಷೇತ್ರದಿಂದ ಮೂವರು ಸದಸ್ಯರನ್ನು ನೇಮಕ ಮಾಡಲಾಗಿದೆ.
ಬೆಂಗಳೂರಿನ ಎ.ಎನ್. ಎ.ಎನ್.ಯಲ್ಲಪ್ಪ ರೆಡ್ಡಿ ಅವರನ್ನು ಕೃಷಿ ಮತ್ತು ಪರಿಸರ, ಎನ್.ಆರ್. ವಿಶುಕುಮಾರ್‌ಸೇರಿ ಆಡಳಿತ ಕ್ಷೇತ್ರದಿಂದ ಕ್ಷೇತ್ರದಿಂದ, ಪ್ರೊ. ರವಿವರ್ಮ ಕುಮಾರ್‌ಸೇರಿ ಇಬ್ಬರನ್ನು, ಗುಜ್ಜಾರಪ್ಪ ಅವರನ್ನು ಚಿತ್ರಕಲೆ ನ್ಯಾಯಾಂಗ ಕ್ಷೇತ್ರದಿಂದ ಇಬ್ಬರು, ಗಿರಿಜಾ ಲೋಕೇಶ್ ಕಿರುತೆರೆ/ಚಲನಚಿತ್ರ ಹಾಗೂ ವಿ. ರವಿಚಂದ್ರನ್ ಚಲನಚಿತ್ರ ಕ್ಷೇತ್ರದಿಂದ ಹಾಗೂ ಆರ್.ಉಮಾದೇವ ಸೇರಿ ಇಬ್ಬರನ್ನು ಕ್ರೀಡಾ ಕ್ಷೇತ್ರ, ಧಾರವಾಡದ ಡಾ. ಎಸ್.ಎಂ. ಶಿವಪ್ರಸಾದ್ ಸೇರಿ ಇಬ್ಬರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ : “ಮಾಂಕ್ ದಿ ಯಂಗ್” ಸಿನಿಮಾ ಬಜಾರ್ OTTಗೆ ಎಂಟ್ರಿ – ಸ್ಕ್ಯಾನ್ ಮಾಡಿ ಚಿತ್ರ ನೋಡಿ!







