ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ – 12′ ರ ಪಾಲಿಗೆ ಮಹಮ್ಮದ್ ಹ್ಯಾರಿಸ್ ನಲಪಾಡ್ ಆಪದ್ಬಾಂಧವನಾಗಿ ಬಂದಿದ್ದಾರೆ. ಬಿಗ್ ಬಾಸ್ ಪ್ರಕರಣದಲ್ಲಿ ಮಿಡ್ ನೈಟ್ ರಂಗಪ್ರವೇಶ ಮಾಡಿದ ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಡಿಸಿಎಂ ಡಿಕೆಶಿ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ನಟ ಕಿಚ್ಚ ಸುದೀಪ್, ಡಿಸಿಎಂ ಡಿಕೆಶಿ ಜೊತೆ 20 ನಿಮಿಷಕ್ಕಿಂತ ಹೆಚ್ಚು ಕಾಲ ಮಾತುಕತೆ ನಡೆಸಿ, ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಮಹಮ್ಮದ್ ನಲಪಾಡ್ ಬಗೆಹರಿಸಿದ್ದಾರೆ.

ರಾತ್ರೋರಾತ್ರಿ ನಟ ಸುದೀಪ್, ಡಿಸಿಎಂ ಡಿಕೆಶಿ ಜೊತೆಗಿನ ಸಂಧಾನ ಸಕ್ಸಸ್ ಆಗಿದ್ದು, 2 ದಿನಗಳಿಂದ ಕ್ಲೋಸ್ ಆಗಿದ್ದ ಬಿಗ್ಬಾಸ್ ಸ್ಟುಡಿಯೋ ಓಪನ್ ಆಗಿದೆ. ಮಧ್ಯರಾತ್ರಿಯೇ ಬೆಂಗಳೂರು ದಕ್ಷಿಣ ಡಿಸಿ ಯಶವಂತ್ ವಿ ಗುರುಕರ್ ಜೊತೆ ಫೋನ್ನಲ್ಲಿ ಡಿಕೆಶಿ ಮಾತುಕತೆ ನಡೆಸಿ ಬಿಗ್ ಬಾಸ್ ಓಪನ್ ಮಾಡುವಂತೆ ಸೂಚನೆ ನೀಡಿದ್ದಾರೆ. ಡಿಕೆಶಿ ಸೂಚನೆ ಬೆನ್ನಲ್ಲೇ ತಡರಾತ್ರಿ 12 ಗಂಟೆಗೆ ಡಿಸಿ, ಎಸ್ಪಿ ನೇತೃತ್ವದಲ್ಲಿ ಬಿಗ್ ಬಾಸ್ ಗೇಟ್ ಓಪನ್ ಮಾಡಲಾಗಿದೆ.

ಮಹಮ್ಮದ್ ಹ್ಯಾರಿಸ್ ನಲಪಾಡ್ ಮಧ್ಯಪ್ರವೇಶದಿಂದ ಕೊನೆಗೂ 2 ದಿನಗಳಿಂದ ಕ್ಲೋಸ್ ಆಗಿದ್ದ ಬಿಗ್ ಬಾಸ್ ಸ್ಟುಡಿಯೋ ಓಪನ್ ಆಗಿದೆ. ಬೆಳ್ಳಂಬೆಳಗ್ಗೆ ಬಿಗ್ ಬಾಸ್ ಸ್ಪರ್ಧಿಗಳು ಮತ್ತೆ ಜಾಲಿವುಡ್ ಸ್ಟುಡಿಯೋಗೆ ಶಿಫ್ಟ್ ಆಗಿದ್ದಾರೆ. ಕನ್ನಡ ಮನರಂಜನಾ ಉದ್ಯಮ ಬಲಗೊಳಿಸಲು ಬದ್ಧ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.

ಇನ್ನು ಬಿಗ್ ಬಾಸ್ ಮನೆ ರೀ ಓಪನ್ ಆಗಿದ್ದಕ್ಕೆ ಕಿಚ್ಚ ಸುದೀಪ್ ಡಿಕೆಶಿಗೆ ಧನ್ಯವಾದ ಸಲ್ಲಿಸಿದ್ದಾರೆ. ನನ್ನ ಕರೆಗೆ ಸ್ಪಂದಿಸಿದ್ದಕ್ಕಾಗಿ ಡಿಕೆಶಿ ಅವರಿಗೆ ಧನ್ಯವಾದ, ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೂ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ : ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ!







