ದರ್ಶನ್​ಗೆ ಕೆಟ್ಟ ಹೆಸರು ತರಲು ಫೇಕ್ ನ್ಯೂಸ್!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಕಿಡಿಗೇಡಿಗಳು ಪೋಸ್ಟರ್​ವೊಂದನ್ನು ವೈರಲ್ ಮಾಡಿದ್ದಾರೆ. ‘ದರ್ಶನ್ ಬಂಧಿಸಿದ್ದು, ಜಾಮೀನು ಕೊಡಿಸಿದ್ದು, ಮತ್ತೆ ಜೈಲಿಗೆ ಕಳುಹಿಸಿದ್ದು ಕಳ್ಳ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ’ ಎಂಬ ಪೋಸ್ಟರ್​ನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದರು. ಇದೀಗ ಡಿ ಕಂಪನಿ ಫ್ಯಾನ್ಸ್​ ಅಸೋಸಿಯೇಷನ್ ಇದು ಫೇಕ್ ನ್ಯೂಸ್ ಎಂದು ಸ್ಪಷ್ಟನೆ ಕೊಟ್ಟಿದೆ.

<iframe src="https://www.facebook.com/plugins/post.php?href=https%3A%2F%2Fwww.facebook.com%2FDcompany171%2Fposts%2Fpfbid0NXhRpmfvLCdh9YzUshS9J68PQKDLr9WpApctqAjkMyPxmRieWWDtGqnEDtMi7yoDl&show_text=true&width=500" width="500" height="653" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share"></iframe>

 

ತಮ್ಮ ಬೇಳೆ ಬೇಯಿಸಿಕೊಳ್ಳಲು ಹಲವಾರು ರಾಜಕೀಯ ಮುಖ ಪುಟಗಳು ಡಿ ಬಾಸ್ ಅಭಿಮಾನಿಗಳ ಹೆಸರಲ್ಲಿ ಪತ್ರವನ್ನು ವೈರಲ್ ಮಾಡುತ್ತಿದ್ದಾರೆ. ಇದಕ್ಕೂ ಅಭಿಮಾನಿಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಡಿ ಕಂಪನಿ ಫ್ಯಾನ್ಸ್​ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.

ವೈರಲ್ ಪೋಸ್ಟರ್​ನಲ್ಲಿ ಏನಿದೆ?

ದರ್ಶನ್ ಜಾತಿಯಲ್ಲಿ ನಾಯ್ಡು ಎಂದು ಮುನಿರತ್ನಂ ಆಪ್ತ ಎಂಬ ಕಾರಣಕ್ಕೆ ಜೈಲಿನಿಂದ ಹೊರಬಂದ ನಂತರ ದರ್ಶನ್ ಕಾಂಗ್ರೆಸ್ ಪರ ನಿಲ್ಲಲಿಲ್ಲ. ಕಾಂಗ್ರೆಸ್‌ನವರಿಗೆ ಸಿಕ್ಕಿದ ಅಸ್ತ್ರವೇ ರೇಣುಕಾಸ್ವಾಮಿ ಕೇಸು. ಜಾಮೀನು ಮಂಜೂರು ಮಾಡಿಸಿದ್ದು ಕಾಂಗ್ರೆಸ್. ನಂತರ ಸುಪ್ರೀಂ ಕೋರ್ಟಿಗೆ ಹೋಗಿ ಜಾಮೀನು ಕ್ಯಾನ್ಸಲ್ ಮಾಡಿಸಿದ್ದು ಕಾಂಗ್ರೆಸ್. ಇದಕ್ಕೆ ಸೂತ್ರದಾರ ಹಾಗು ಪಾತ್ರದಾರ ಕಾಂಗ್ರೆಸ್.

ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಕೆಡವಿ ಹಾಕಿದ್ದು ಸಹ ಇದೇ ಕಾಂಗ್ರೇಸ್ ಸರ್ಕಾರ, ಯಾವುದೇ ಸಮಸ್ಯೆನ್ನು ಬಗೆಹರಿಸದೇ ಈಗ ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ನಾಟಕವಾಡುತ್ತಿರುವುದು ಇಡೀ ರಾಜ್ಯದ ಜನತೆಗೆ ಗೊತ್ತು. ಕಾಂಗ್ರೇಸ್ ಹಾಗು ಕದೀಮ ಡಿ.ಕೆ. ಶಿವಕುಮಾರ್‌ರವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸೋಣ, ಬುದ್ದಿ ಕಲಿಸೋಣ.

ದರ್ಶನ್ ಅಭಿಮಾನಿಗಳು, ಅವರ ಕುಟುಂಬದ ಅಭಿಮಾನಿಗಳ ಒಂದೇ ಒಂದು ಮತವು ಕಾಂಗ್ರೇಸ್‌ಗೆ ಬೇಡ. ನಮ್ಮ ತಾಕತ್ತು ಒಗ್ಗಟ್ಟು ತೋರಿಸೋಣ. ಏನೇ ಆಗಲಿ ನಾವು ಕಾಂಗ್ರೇಸ್ ಬೆಂಬಲಿಸುವುದು ಬೇಡ. ಯಾರೇ ಗೆಲ್ಲಲಿ, ಯಾವುದೇ ಪಕ್ಷ ಗೆಲ್ಲಲಿ, ಕಾಂಗ್ರೆಸ್ ಮಾತ್ರ ಸೋಲಬೇಕು. ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಸೋಲಬೇಕು. ದರ್ಶನ್ ಅಭಿಮಾನಿಗಳ ತಾಕತ್ತು ಮತಗಳಾಗಿ ಪರಿವರ್ತನೆಯಾಗಲಿ. ಮುಂದಿನ ದಿನಗಳಲ್ಲಿ ದರ್ಶನ್ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾಯಿತ ಸದಸ್ಯರಾಗಲಿ. ಆಗ ಗೊತ್ತಾಗುತ್ತೆ, ಅವರ ತಾಕತ್ತು, ಜನಬೆಂಬಲ.

ಇದನ್ನೂ ಓದಿ : ಮದುವೆ ಮುಗಿಸಿ ಹಿಂತಿರುಗುತ್ತಿದ್ದ ಬಸ್ ಪಲ್ಟಿ – 30 ಮಂದಿಗೆ ಗಾಯ!

Btv Kannada
Author: Btv Kannada

Read More