ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್‌ ಬಂಕ್​ಗೆ ನುಗ್ಗಿದ ಮಿನಿ ಟ್ರಕ್!

ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಮಿನಿ ಟ್ರಕ್ ಪೆಟ್ರೋಲ್‌ ಬಂಕ್​ಗೆ ನುಗ್ಗಿರುವ ಘಟನೆ ನಗರದ ಚಾಮರಾಜಪೇಟೆ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಸನ್​ಪ್ಯೂರ್ ಎಣ್ಣೆ ಸಾಗಾಟ ಮಾಡ್ತಿದ್ದ ಟ್ರಕ್ ನಯಾರಾ ಪೆಟ್ರೋಲ್ ಬಂಕ್​ಗೆ ನುಗ್ಗಿರುವ ಘಟನೆ ಚಾಮರಾಜಪೇಟೆ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ಅಪಘಾತದಿಂದ ಪೆಟ್ರೋಲ್ ಬಂಕ್​ನ ಶೌಚಾಲಯದ ಕಟ್ಟಡ ಜಖಂ ಆಗಿದ್ದು, ಡಿಕ್ಕಿಯ ರಭಸಕ್ಕೆ ನಿಲ್ಲಿಸಿದ್ದ ಬೈಕ್ ಲಾರಿ ಅಡಿ ಸಿಲುಕಿ ಸಂಪೂರ್ಣ ಜಖಂ ಆಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಹೊಸತನದ ಸುಳಿವಿನೊಂದಿಗೆ ‘ಟೈಮ್ ಪಾಸ್’ ಚಿತ್ರದ ಟ್ರೈಲರ್ ರಿಲೀಸ್!

Btv Kannada
Author: Btv Kannada

Read More