ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 12’ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ (KSPCB) ನೋಟಿಸ್ ನೀಡಿ ಬಿಗ್ ಬಾಸ್ ಮನೆಗೆ ಬೀಗ ಹಾಕಿದೆ. ಇದೀಗ ಈ ಬೆನ್ನಲ್ಲೇ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ನಿಂದಲೂ ಜಾಲಿವುಡ್ ಸ್ಟುಡಿಯೋಗೆ ಆಘಾತ ಎದುರಾಗಿದೆ.
ವಿದ್ಯುತ್ ಸ್ಥಾವರ ಸ್ಥಾಪನೆ ಬಗ್ಗೆ ಕಾರಣ ಕೇಳಿ ಬೆಸ್ಕಾಂ ನೋಟಿಸ್ ಜಾರಿ ಮಾಡಿದೆ. ಸ್ಥಳೀಯ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆದಿಲ್ಲ, ಅನುಮೋದನೆ ಪಡೆಯದೇ ವಿದ್ಯುತ್ ಸ್ಥಾವರ ಸ್ಥಾಪಿಸಿರೋದು ಹೇಗೆ ಎಂದು ಬೆಸ್ಕಾಂ ಅಧಿಕಾರಿಗಳು ವೆಲ್ಸ್ ಸ್ಟುಡಿಯೋ ವಿರುದ್ಧ ಕ್ರಮ ಜರುಗಿಸಲಿದ್ದಾರೆ.
15 ದಿನಗಳವರೆಗೆ ತಾತ್ಕಾಲಿಕ ಅನುಮತಿ ಕೊಡಿ, ರಾಜ್ಯ ಸರ್ಕಾರದ ಎಲ್ಲಾ ಷರತ್ತುಗಳನ್ನು ಪೂರೈಸುತ್ತೇವೆ. ನಾವು ಲೈಸೆನ್ಸ್ ಪಡೆದು ಸ್ಟುಡಿಯೋ ನಡೆಸುತ್ತಿದ್ದೇವೆ, KSPCBಯ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದೇವೆ. KSPCBಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಕೊಡುತ್ತೇವೆ ಎಂದು ಬೆಂಗಳೂರು ದಕ್ಷಿಣ ಡಿಸಿಗೆ ವೆಲ್ಸ್ ಸ್ಟುಡಿಯೋಸ್ ಪತ್ರ ಬರೆದಿದೆ.
ಇದನ್ನೂ ಓದಿ : ಮಂಡ್ಯ : ದೇಗುಲದ ಹುಂಡಿ ಕದ್ದು ಹಣ ಎಣಿಸುವಾಗ ಸಿಕ್ಕಿಬಿದ್ದ ಖತರ್ನಾಕ್ ಕಳ್ಳರು!







