ಬಾಗಲಕೋಟೆ : ಬೈಕ್ ಮತ್ತು ಮಹಿಂದ್ರಾ ವಾಹನ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ ರಬಕವಿಬನಹಟ್ಟಿ ಬಳಿ ನಡೆದಿದೆ. ರೋಜಾಕ್ ಸಿಕಂದರ್ ಮುಲ್ಲಾ (54), ಅರ್ಷದ ಆಸಿಫ್ ಬೆಪಾರಿ (2) ಮೃತ ದುರ್ದೈವಿಗಳು.

ಮೃತರು ರಬಕವಿ ಬನಹಟ್ಟಿ ತಾಲೂಕಿನ ರಾಂಪುರದವರಾಗಿದ್ದು, ಬನಹಟ್ಟಿಯಿಂದ ಜಮಖಂಡಿ ಕಡೆ ತೆರಳುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಈ ಸಂಬಂಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಡಾ. ಎಸ್. ನಾರಾಯಣ್ ನಿರ್ದೇಶನದ ‘ಮಾರುತ’ ಸಿನಿಮಾ ಮೆಚ್ಚಿದ ಸೆನ್ಸಾರ್ ಮಂಡಳಿ – ಅ.31ಕ್ಕೆ ಚಿತ್ರ ತೆರೆಗೆ!
Author: Btv Kannada
Post Views: 329







