ಭಾರತದ ಅತಿದೊಡ್ಡ ಸ್ವದೇಶಿ OTT ಪ್ಲಾಟ್‌ಫಾರ್ಮ್ zee5ನಲ್ಲಿ ಅಕ್ಟೋಬರ್ 17 ರಿಂದ ಬಹುನಿರೀಕ್ಷಿತ ರೊಮ್ಯಾಂಟಿಕ್ ಥ್ರಿಲ್ಲರ್ ‘ಎಳುಮಲೆ’ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಪುನೀತ್ ರಂಗಸ್ವಾಮಿ ನಿರ್ದೇಶನದ ಈ ಚಿತ್ರಕ್ಕೆ ತರುಣ್ ಸುಧೀರ್ ಮತ್ತು ಅಟ್ಲಾಂಟಾ ನಾಗೇಂದ್ರ ನಿರ್ಮಿಸಿದ್ದಾರೆ. ರಾಣಾ ನಾಯಕನಾಗಿ, ಪ್ರಿಯಾಂಕಾ ಆಚಾರ್ ನಾಯಕಿಯಾಗಿ ಅಭಿನಯಿಸಿದ್ದು, ಜಗಪತಿ ಬಾಬು, ಕಿಶೋರ್ ಮತ್ತು ಟಿಎಸ್ ನಾಗಾಭರಣ ಸೇರಿದಂತೆ ಪ್ರತಿಭಾನ್ವಿತ ತಾರಾಗಣ ಚಿತ್ರದಲ್ಲಿದೆ.

ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿ ನಡೆಯುವ ಪ್ರೇಮಕಥೆ ಇದಾಗಿದೆ. ಮೈಸೂರಿನ ಅನಾಥ ಹುಡುಗನಾಗಿ ರಾಣಾ ನಟಿಸಿದ್ದಾರೆ. ಮೈಸೂರಿನಲ್ಲಿ ಓದಲು ಬಂದ ತಮಿಳುನಾಡಿನ ಶ್ರೀಮಂತ ಕುಟುಂಬದ ಹುಡುಗಿ ರೇವತಿಯಾಗಿ ಪ್ರಿಯಾಂಕಾ ಅಭಿನಯಿಸಿದ್ದಾರೆ. ಇವರಿಬ್ಬರ ಪ್ರೇಮಕಥೆಯನ್ನು ಏಳುಮಲೆ ಮೂಲಕ ಸೊಗಸಾಗಿ ಕಟ್ಟಿಕೊಡಲಾಗಿದೆ.

Zee5ನಲ್ಲಿ ಏಳುಮಲೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡ ನಟ ರಾಣಾ, ಹರೀಶ್ ತುಂಬಾ ಸರಳ. ಪಕ್ಕದ ಮನೆಯ ಹುಡುಗನ ಪಾತ್ರ. ಅವನ ಪಾತ್ರ ನಿರ್ವಹಿಸುವುದು ನನಗೆ ತುಂಬಾ ವೈಯಕ್ತಿಕವೆನಿಸಿದ ಪ್ರಯಾಣವಾಗಿತ್ತು. ಸ್ಥಳೀಯ ಭಾಷೆಯಲ್ಲಿ ಕೆಲಸ ಮಾಡುವುದರಿಂದ ಹಿಡಿದು ಅವನ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವವರೆಗೆ, ಪ್ರಕ್ರಿಯೆಯು ಸವಾಲಿನ ಮತ್ತು ಪ್ರತಿಫಲದಾಯಕವಾಗಿತ್ತು. ಏಳುಮಲೆ ಸಿನಿಮಾವನ್ನು ಬಹಳ ಪ್ರೀತಿಯಿಂದ ಮಾಡಲಾಗಿದೆ. ಈಗ, ಅದರ ಡಿಜಿಟಲ್ ಪ್ರೀಮಿಯರ್‌ನೊಂದಿಗೆ, ಇನ್ನೂ ಹೆಚ್ಚಿನ ಪ್ರೇಕ್ಷಕರು ಹರೀಶ್ ಅವರ ಕಥೆಯೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ಪಾತ್ರವು zee5 ನ ವೀಕ್ಷಕರೊಂದಿಗೆ ಉಳಿದರೆ, ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂದು ನನಗೆ ಅನಿಸುತ್ತದೆ” ಎಂದರು.
ಇದನ್ನೂ ಓದಿ : ಕಾಂತಾರ ಸಿನಿಮಾ ನೋಡಿ ‘ದೈವ ಅವಾಹನೆ’ ಅನುಕರಿಸಿದರೆ ಕಾನೂನು ಕ್ರಮ – ಚಿತ್ರತಂಡದಿಂದ ಖಡಕ್ ಸಂದೇಶ!







