ಬೆಂಗಳೂರು : ನಿನ್ನೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, 131 ಇನ್ಪೆಕ್ಟರ್ ಹಾಗೂ 27 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಆದರೆ ಇದೀಗ 4 ಪ್ರಮುಖ ಸಿಟಿಗಳ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ಸರ್ಕಾರ ಬ್ರೇಕ್ ಹಾಕಿದೆ.
ಬೆಂಗಳೂರು ಸಿಟಿ, ಮೈಸೂರು ಸಿಟಿ, ಬೆಳಗಾವಿ ಸಿಟಿ, ಮಂಗಳೂರು ಸಿಟಿ ವರ್ಗಾವಣೆಗೆ ಸರ್ಕಾರ ತಡೆ ನೀಡಿದ್ದು, ಸಿಎಂ, ಡಿಸಿಎಂ, ಗೃಹ ಸಚಿವ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳ ವರ್ಗಾವಣೆ ನಡೆಯಬೇಕೆಂಬ ಸಂದೇಶ ರವಾನಿಸಲಾಗಿದೆ. ಈ ಮೂವರ ಕಣ್ಗಾವಲಿನಲ್ಲೇ ವರ್ಗಾವಣೆ ನಡೆಯಬೇಕೆಂಬ ಹೈಕಮಾಂಡ್ ಸಂದೇಶ ನೀಡಿದೆ ಎನ್ನಲಾಗುತ್ತಿದೆ.
ಮೊನ್ನೆ ಬೆಂಗಳೂರಿಗೆ ರಾಜ್ಯ ಉಸ್ತುವಾರಿ ಬಂದಾಗಲೂ ವರ್ಗಾವಣೆ ಫೈಟ್ ವಿಚಾರ ಪ್ರಸ್ತಾಪವಾಗಿತ್ತು. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಸಿಎಂಗೆ ಖಡಕ್ ಸಂದೇಶ ರವಾನಿಸಿದ್ಯಾ ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ : ಮಾರ್ಕ್ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ – ‘ಸೈಕ್ ಸೈತಾನ್’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಕಿಚ್ಚ!







