ಹೋಟೆಲ್ ಬಿಲ್ಡಿಂಗ್ ರೆಂಟ್, ಕಮರ್ಷಿಯಲ್ ಗ್ಯಾಸ್ GST ಇಳಿಸಿ – ಕೇಂದ್ರ ಸರ್ಕಾರಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಮನವಿ!

ಬೆಂಗಳೂರು : ಹೋಟೆಲ್ ಬಿಲ್ಡಿಂಗ್ ರೆಂಟ್ ಹಾಗೂ ಕಮರ್ಷಿಯಲ್ ಗ್ಯಾಸ್ GST ಇಳಿಸುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರ ಹೊಟೇಲ್ ರೂಂ ಬಾಡಿಗೆಯ GST ಇಳಿಕೆ ಮಾಡಿದೆ, 18% ಇದ್ದ GSTಯನ್ನ 5%ಗೆ ಇಳಿಸಿದೆ. ಇದರಿಂದ ಹೊಟೇಲ್ ಉದ್ದಿಮೆದಾರರಿಗೆ ನಷ್ಟವಾಗುತ್ತಿದೆ. ಹೊಟೇಲ್ ಬಿಲ್ಡಿಂಗ್ ರೆಂಟ್ ಕೂಡ ನಮಗೆ ಹೊರೆಯಾಗುತ್ತಿದೆ. ಹೀಗಾಗಿ ಬಿಲ್ಡಿಂಗ್ ರೆಂಟ್ ಹಾಗೂ ಕಮರ್ಷಿಯಲ್ ಗ್ಯಾಸ್‌ನ GST ಇಳಿಸುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ.

18% ಇರುವ ಜಿಎಸ್‌ಟಿ ಯನ್ನ 5%ಗೆ ಇಳಿಸುವಂತೆ ಬೆಂಗಳೂರು ಹೊಟೇಲ್ ಮಾಲೀಕರ ಸಂಘ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಏಜೆಂಟ್​ಗಳ ಮೇಲೆ ಹಲ್ಲೆ – ಕೇಸ್ ದಾಖಲು!

Btv Kannada
Author: Btv Kannada