ಹಾವೇರಿ : ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ರಿಕವರಿ ಏಜೆಂಟ್ಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ನಡೆದಿದೆ.
ರಿಕವರಿ ಏಜೆಂಟ್ ಗೌರಮ್ಮ ಮತ್ತು ಗಣೇಶ್ ಎಂಬುವವರನ್ನು ಸಾಲ ಮರುಪಾವತಿ ಮಾಡ್ತೀನಿ ಬಾ ಅಂತ ಕರೆಸಿ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಸುಲೇಮಾನ, ನೂರಜಾನ್ ಸೇರಿ ಒಟ್ಟು ಐದು ಜನರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.
A2 ಆರೋಪಿ ನೂರಜಾನ್ ಧರ್ಮಸ್ಥಳ ಸಂಘದಲ್ಲಿ 3 ಲಕ್ಷ ಸಾಲ ಪಡೆದಿದ್ದ. ಆರಂಭದಲ್ಲಿ 1 ಲಕ್ಷ 6 ಸಾವಿರ ರೂಪಾಯಿ ಕಂತುಗಳನ್ನ ಕಟ್ಟಿದ್ದ. ಇನ್ನುಳಿದ 1 ಲಕ್ಷ 94 ಸಾವಿರ ರೂಪಾಯಿ ಹಣವನ್ನ ಕಟ್ಟದೆ ಸಂಘಕ್ಕೆ ವಂಚನೆ ಮಾಡಿದ್ದ. ಆದರೆ ಏಕಾಏಕಿ ಸಾಲ ಕಟ್ಟುವುದಾಗಿ ಆರೋಪಿ, ಏಜೆಂಟ್ಗಳನ್ನು ಮನೆಗೆ ಕರೆಸಿದ್ದ. ಬಳಿಕ ಮನೆಯ ಎರಡೂ ಬದಿಯಲ್ಲಿ ಬಾಗಿಲು ಹಾಕಿ ಕುರ್ಚಿಯಿಂದ ಹಲ್ಲೆ ಮಾಡಿದ್ದಾರೆ.
ಗಾಯಾಳುಗಳಿಗೆ ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸ್ಯಾಂಡಲ್ವುಡ್ ನಟಿಗೆ ಸಿನಿಮಾ ಹೆಸರಲ್ಲಿ ಲೈಂಗಿಕ ಕಿರುಕುಳ ಆರೋಪ – ನಿರ್ಮಾಪಕ ಹೇಮಂತ್ ಅರೆಸ್ಟ್!







