ದೇಶದ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ನಟ ದರ್ಶನ್ ಕೇಸ್​ಗೆ 2ನೇ ಸ್ಥಾನ!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದ್ದು, ಘಟನೆ ನಡೆದು ವರ್ಷಗಳೇ ಕಳೆದರೂ ಇದರ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಈಗ ದರ್ಶನ್ ಕೇಸ್ ದೇಶದ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿದೆ.

ಹೌದು.. ದೇಶದ ಭೀಕರ ಘಟನೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ನಟ ದರ್ಶನ್ ಕೇಸ್​ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವರ್ಷದಲ್ಲಿ ಮೇಜರ್ ಕೇಸ್ ಅನಿಸಿಕೊಂಡ ಪ್ರಕರಣ ಇದಾಗಿದ್ದು, ಘಟನೆಯ ತೀವ್ರತೆಯ ಮೇಲೆ ಅಂಕಿ-ಅಂಶ ಬಿಡುಗಡೆ ಮಾಡಲಾಗಿದೆ.

ಕೋಲ್ಕತ್ತಾ ವೈದ್ಯೆ ರೇಪ್ & ಮರ್ಡರ್ ಮೊದಲ ಕೇಸ್ ಆಗಿದ್ದರೆ ರೇಣುಕಾಸ್ವಾಮಿಯ ಕೊಲೆ ಕೇಸ್ 2 ನೇ ಸ್ಥಾನದಲ್ಲಿದೆ. ಸಂಜಯ್ ರಾಯ್ ಎಂಬಾತ ಕೋಲ್ಕತ್ತಾ ಟ್ರೈನಿ ಡಾಕ್ಟರ್ ಯುವತಿಯನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಆರೋಪಿ ಸಂಜಯ್ ರಾಯ್​ಗೆ ಈಗಾಗಲೇ ಜೀವಾವಧಿ ಶಿಕ್ಷೆ ಕೂಡ ನೀಡಲಾಗಿದೆ. ಇದು ದೇಶದ ಮೊದಲ ಪ್ರಮುಖ ಹಾಗೂ ಸೆನ್ಸೇಷನ್ ಪ್ರಕರಣ ಎನಿಸಿಕೊಂಡಿತ್ತು. ಹೀಗಾಗಿ ಈ ಅತ್ಯಾಚಾರ, ಕೊಲೆ ಪ್ರಕರಣ ದೇಶದ ನಂ.1 ಕೇಸ್ ಅನಿಸಿಕೊಂಡಿದೆ.

ದೇಶದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣ 2ನೇ ಸ್ಥಾನದಲ್ಲಿದೆ. 2024-25ರ ಸಿಗ್ನಿಫೈ ರೀಸೆಂಟ್ ಕೇಸಲ್ಲಿ ರೇಣುಕಾಸ್ವಾಮಿ ಕೇಸ್ ಕೂಡ ಒಂದು. ಒಟ್ಟು ಆರು ಪ್ರಕರಣಗಳು ಸಿಗ್ನಿಫೈ, ಸೆನ್ಷೇಷನಲ್ ಅನಿಸಿಕೊಂಡ ಪ್ರಕರಣಗಳಾಗಿವೆ. ದೇಶದಲ್ಲಿ ಎರಡು ವರ್ಷದಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಎರಡನೆ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಪುಣೇ ಪೋರ್ಷೆ ಕೇಸ್, ಹೈದರಾಬಾದ್ ಟೆಕ್ ಸ್ಕ್ಯಾಮ್, ಗಾಯಕ ಝುಬೇನ್ ಗರ್ಗ್ ಶಂಕ್ಯಾಸ್ಪದ ಸಾವು, ಯಾ ಆಲಿ ಖ್ಯಾತಿಯ ಜುಬೇನ್ ಗರ್ಗ್ ಕೇಸ್​ ಕೂಡ ಪ್ರಮುಖ ಅನಿಸಿಕೊಂಡಿದೆ.

ಇದನ್ನೂ ಓದಿ : ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗಳಲ್ಲಿ ನಕಲಿ ಐಡಿ ಬಳಸಿ ವಿದ್ಯಾರ್ಥಿಗಳ ವಾಸ್ತವ್ಯ – ಮೇಜರ್ ಮಣಿವಣ್ಣನ್ ನೇತೃತ್ವದಲ್ಲಿ ಮೆಗಾ ರೇಡ್!

Btv Kannada
Author: Btv Kannada

Read More