ರಾಷ್ಟ್ರೀಯ ಉತ್ತಮ ಶಿಕ್ಷಕ ಪುರಸ್ಕೃತ ಪಿ.ಜಿ ದ್ವಾರಕನಾಥ್ ನಿಧನ!

ಬೆಂಗಳೂರು : ರಾಜಾಜಿನಗರದ ಹೆಮ್ಮೆಯ ಶಿಕ್ಷಣ ಸಂಸ್ಥೆ ವಿದ್ಯಾವರ್ಧಕ ಸಂಘದ ( ಸರ್ದಾರ್ ಪಟೇಲ್ ಶಾಲೆ) ನಿವೃತ್ತ ಪ್ರಾಂಶುಪಾಲ ಪಿ ಜಿ ದ್ವಾರಕನಾಥ್ ಅವರು ಶುಕ್ರವಾರ ನಿಧನರಾಗಿದ್ದಾರೆ.

ಪಿ ಜಿ ದ್ವಾರಕನಾಥ್ ಅವರು ಶಿಕ್ಷಕರಾಗಿ, ಪ್ರಾಂಶುಪಾಲರಾಗಿ, ಕಾರ್ಯದರ್ಶಿಯಾಗಿ, ಗೌರವ ಅಧ್ಯಕ್ಷರಾಗಿ ವಿದ್ಯಾವರ್ಧಕ ಸಂಘದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರು ಉತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಅಷ್ಟೇ ಅಲ್ಲ, ಪಿ ಜಿ ದ್ವಾರಕನಾಥ್ ಅವರು ಮಾರ್ಗದರ್ಶನದಲ್ಲಿ ಶಾಲೆಯು ಪ್ರತಿವರ್ಷ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಂಡಿದ್ದರು. ಅದೆಷ್ಟೊ ವಿದ್ಯಾರ್ಥಿಗಳಿಗೆ ಪಾಠಮಾಡಿದ್ದ ನೆಚ್ಚಿನ ಮೇಷ್ಟ್ರು ಆಗಿದ್ದರು. ಶಾಲೆಯ ಬಗ್ಗೆ ಸದಾ ಯೋಚಿಸುತ್ತಿದ್ದ ಶಿಸ್ತಿನ ಸಿಪಾಯಿಯ ಅಗಲಿಕೆಯಿಂದ ಶಾಲಾ ಸಿಬ್ಬಂದಿ ದುಃಖತಪ್ತರಾಗಿದ್ದಾರೆ.

ಇದನ್ನೂ ಓದಿ : ಪತ್ನಿ ಜೊತೆಗಿನ ಸೆಕ್ಸ್ ರೆಕಾರ್ಡ್ ಕೇಸ್​ಗೆ ಬಿಗ್ ಟ್ವಿಸ್ಟ್ – ವಿಡಿಯೋ ರಿಲೀಸ್ ಮಾಡಿ ಹೆಂಡ್ತಿ ಆರೋಪವನ್ನು ತಳ್ಳಿಹಾಕಿದ ಪತಿ!

Btv Kannada
Author: Btv Kannada

Read More