ಪತ್ನಿ ಜೊತೆಗಿನ ಸೆಕ್ಸ್ ರೆಕಾರ್ಡ್ ಕೇಸ್​ಗೆ ಬಿಗ್ ಟ್ವಿಸ್ಟ್ – ವಿಡಿಯೋ ರಿಲೀಸ್ ಮಾಡಿ ಹೆಂಡ್ತಿ ಆರೋಪವನ್ನು ತಳ್ಳಿಹಾಕಿದ ಪತಿ!

ಬೆಂಗಳೂರು : ಪತಿ ಮನೆಯ ಬೆಡ್ ರೂಂನಲ್ಲೇ ಸೀಕ್ರೆಟ್ ಕ್ಯಾಮೆರಾ ಫಿಕ್ಸ್ ಮಾಡಿ ತನ್ನ ಜೊತೆಗಿನ ಸೆಕ್ಸ್ ರೆಕಾರ್ಡ್ ಮಾಡ್ಕೊಳ್ತಿದ್ದ ಎಂದು ಆರೋಪಿಸಿ ಹೀನಾಮುಲ್ ವಿರುದ್ಧ ಪತ್ನಿ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಳು. ಇದೀಗ ಈ ಕೇಸ್​ಗೆ ಬಿಗ್​ ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತ ಮಹಿಳೆಯ ಗಂಡ ಹೀನಾಮುಲ್ ಹಕ್ ವಿಡಿಯೋ ರಿಲೀಸ್ ಮಾಡಿ ಹೆಂಡ್ತಿ ಆರೋಪವನ್ನು ತಳ್ಳಿಹಾಕಿದ್ದಾನೆ.

ಮದುವೆಗೆ ಮುಂಚೆ ಆಕೆಯ ಜೊತೆ ಸಂಬಂಧ ಹೊಂದಿದ್ದು ನಿಜ. ಆದ್ರೆ, ಆಕೆಯೇ ನನ್ನ ಒತ್ತಾಯ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಆಕೆ ಚಾಟ್ ಮಾಡಿರೋ ಮೆಸೇಜ್​​ ನನ್ನ ಬಳಿ ಇದೆ. ಆಗಿನಿಂದ ಆಕೆ ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದಳು, ಟಾರ್ಚರ್​ ಮಾಡ್ತಿದ್ದಳು, ಅದೇ ಕಾರಣಕ್ಕೆ ಆಕೆಯನ್ನ ಮದುವೆಯಾಗಿದ್ದೆ ಎಂದು ಹೀನಾಮುಲ್​ ಹೇಳಿದ್ದಾನೆ.

ನಾನು 21 ಮದುವೆಯಾಗಿಲ್ಲ ನನಗೆ ಆಗಿರುವುದು ಒಂದೇ ಮದುವೆ, ಈ ವಿಚಾರವನ್ನ ಆಕೆಗೆ ಹಾಗೂ ಅವರ ಕುಟುಂಬಸ್ಥರಿಗೂ ಹೇಳಿದ್ದೆ. ಮದುವೆ ಬ್ರೋಕರ್ ಒಬ್ಬರಿಂದ ಈ ಸಂಬಂಧ ಬಂದಿತ್ತು, ನನ್ನ ಬಳಿಯೇ ಅವರು 17 ಲಕ್ಷ ಹಣ ವಸೂಲಿ ಮಾಡಿದ್ದಾರೆ. ನನ್ನ ಪತ್ನಿಗೆ 13 ಲಕ್ಷದ ಒಡವೆ ನಾನೇ ಕೊಡಿಸಿದ್ದೇನೆ, ನಾನು 21 ಮದುವೆ ಆಗಿದ್ದೆ ಆದ್ರೆ ಆಕೆ ಯಾಕೆ ನನ್ನ ಮದುವೆ ಆದಳು. ಇದೆಲ್ಲ ನನ್ನ ಮೇಲೆ ಮಾಡುತ್ತಿರುವ ಸುಳ್ಳು ಆರೋಪ. ಈಕೆಯ ಅಕ್ಕನದ್ದು ಇದೆ ಕತೆ ಆಕೆಗೂ ಇಬ್ಬರ ಜೊತೆ ಡಿವೋರ್ಸ್ ಆಗಿದೆ, ಯಾವ ವ್ಯಕ್ತಿ ತನ್ನ ಹೆಂಡತಿ ವಿಡಿಯೋ ಮಾಡಿ ಬೇರೆಯವರಿಗೆ ಕಳುಹಿಸುತ್ತಾನೆ ಹೇಳಿ ಎಂದು ವಿಡಿಯೋ ರಿಲೀಸ್ ಮಾಡಿ ಹೀನಾಮಲ್ ಹಕ್ ಅಳಲು ತೋಡಿಕೊಂಡಿದ್ದಾನೆ.

ನನ್ನ ತಂದೆ ತಾಯಿಗೆ ಪ್ರತಿ ನಿತ್ಯ ಅವಳು ಹೊಡೆಯುತ್ತಿದ್ದಳು, ಆಗಲೂ ಸಹ ನಾನು ಸಿಸಿಟಿವಿ ಹಾಕಿಸಿಲ್ಲ. ನಾನು ಯಾವುದೇ ವಿಡಿಯೋ ಶೂಟ್ ಮಾಡಿಲ್ಲ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಹೀನಾಮುಲ್​​​​​​​​​​​​ ಮನವಿ ಮಾಡಿದ್ದಾನೆ.

 


ಇದನ್ನೂ ಓದಿ : 1 ಲಕ್ಷ ಲಂಚಕ್ಕೆ ಡಿಮ್ಯಾಂಡ್ – KPTCL ಎಕ್ಸಿಕ್ಯೂಟಿವ್ ಎಂಜಿನಿಯರ್ ಸೇರಿ ಇಬ್ಬರು ‘ಲೋಕಾ’ ಬಲೆಗೆ!

Btv Kannada
Author: Btv Kannada

Read More