1 ಲಕ್ಷ ಲಂಚಕ್ಕೆ ಡಿಮ್ಯಾಂಡ್ – KPTCL ಎಕ್ಸಿಕ್ಯೂಟಿವ್ ಎಂಜಿನಿಯರ್ ಸೇರಿ ಇಬ್ಬರು ‘ಲೋಕಾ’ ಬಲೆಗೆ!

ಬೆಂಗಳೂರು : ಎಲೆಕ್ಟ್ರಿಸಿಟಿ NOCಗೆ ಬರೋಬ್ಬರಿ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ KPTCL ಎಕ್ಸಿಕ್ಯೂಟಿವ್ ಎಂಜಿನಿಯರ್ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

KPTCL ಎಕ್ಸಿಕ್ಯೂಟಿವ್ ಎಂಜಿನಿಯರ್ ಜ್ಯೋತಿ ಪ್ರಕಾಶ್
KPTCL ಎಕ್ಸಿಕ್ಯೂಟಿವ್ ಎಂಜಿನಿಯರ್ ಜ್ಯೋತಿ ಪ್ರಕಾಶ್

KPTCL ಎಕ್ಸಿಕ್ಯೂಟಿವ್ ಎಂಜಿನಿಯರ್ ಜ್ಯೋತಿ ಪ್ರಕಾಶ್, ಹಾಗೂ ಖಾಸಗಿ ವ್ಯಕ್ತಿ ನವೀನ್ ಅನ್ನು ಲೋಕ ಟ್ರ್ಯಾಪ್ ಮಾಡಿದೆ. ಗುತ್ತಿಗೆದಾರ ಅನಂತ್ ಎಂಬುವವರ ಬಳಿ ಜ್ಯೋತಿ ಪ್ರಕಾಶ್ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಜ್ಯೋತಿ ಪ್ರಕಾಶ್ 50 ಸಾವಿರ ಹಣ ಲಂಚ ಪಡೆಯಿತ್ತಿದ್ದ ವೇಳೆ ಲೋಕಾ ಡಿವೈಎಸ್ಪಿ ಬಸವರಾಜ್ ಮುಗ್ದಮ್ ಟೀಂ ಟ್ರ್ಯಾಪ್ ಮಾಡಿದೆ.

ನವೀನ್
     ನವೀನ್

ಲಂಚಬಾಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಜ್ಯೋತಿ ಪ್ರಕಾಶ್ ಅರೆಸ್ಟ್ ಆಗಿದ್ದು, ಸದ್ಯ ಈ ಪ್ರಕರಣದ ತನಿಖೆ ಲೋಕಾಯುಕ್ತ ಪೊಲೀಸರಿಂದ ಮುಂದುವರಿದಿದೆ

ಇದನ್ನೂ ಓದಿ : ನಟಿ ರಮ್ಯಾ ವಿರುದ್ಧ ಅವಹೇಳನಕಾರಿ ಪೋಸ್ಟ್ ಕೇಸ್ – ಕೊಲೆ ಆರೋಪಿ ದರ್ಶನ್ ಪೊರ್ಕಿ ಫ್ಯಾನ್ಸ್​ಗೆ ಇನ್ನೂ ಸಿಗಲಿಲ್ಲ ಬೇಲ್!

Btv Kannada
Author: Btv Kannada

Read More