ನಟಿ ರಮ್ಯಾ ವಿರುದ್ಧ ಅವಹೇಳನಕಾರಿ ಪೋಸ್ಟ್ ಕೇಸ್ – ಕೊಲೆ ಆರೋಪಿ ದರ್ಶನ್ ಪೊರ್ಕಿ ಫ್ಯಾನ್ಸ್​ಗೆ ಇನ್ನೂ ಸಿಗಲಿಲ್ಲ ಬೇಲ್!

ಬೆಂಗಳೂರು : ನಟಿ ರಮ್ಯಾ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ 12 ಮಂದಿ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಇನ್ನೂ ಕೊಲೆ ಆರೋಪಿ ದರ್ಶನ್ ಪೊರ್ಕಿ ಅಭಿಮಾನಿಗಳಿಗೆ ಬೇಲ್ ಸಿಕ್ಕಿಲ್ಲ. ಇದೀಗ ಪ್ರಕರಣದ ತನಿಖೆ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರಿಂದ ಮುಂದುವರಿದಿದ್ದು, ಸೈಬರ್ ಕ್ರೈಮ್ ಪೊಲೀಸರು 12 ಮಂದಿ ಆರೋಪಿಗಳ ಫೋನ್​​ ರಿಟ್ರೀವ್ ಮಾಡಲು ಮುಂದಾಗಿದ್ದಾರೆ. ರಿಟ್ರೀವ್​​ಗಾಗಿ ಫೋನ್​ನ್ನು FSLಗೆ ರವಾನಿಸಿದ್ದು, FSL ವರದಿ ಬಂದ ಬಳಿಕ ಚಾರ್ಜ್​ಶೀಟ್ ರೆಡಿಮಾಡಲಿದ್ದಾರೆ.

12 ಮೊಬೈಲ್ ಫೋನ್ ರಿಟ್ರೀವ್ ರಿಪೋರ್ಟ್ ಬಳಿಕ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಚಾರ್ಜ್​ಶೀಟ್ ಮಾಡಲು ಸಿದ್ದತೆ ನಡೆಸಲಿದ್ದಾರೆ. ಅಂದು ಚಪಲಕ್ಕೆ ಪೋಸ್ಟ್ ಹಾಕಿ ಪುಂಡಾಟ ಮಾಡಿದ್ದ ದರ್ಶನ್ ಫ್ಯಾನ್ಸ್​ ಇದೀಗ ಜಾಮೀನಿಗಾಗಿ ಪರದಾಡುತ್ತಿದ್ದಾರೆ. ಮಕ್ಕಳ ಪರಿಸ್ಥಿತಿ ಕಂಡು ಪೋಷಕರು ಕಣ್ಣೀರು ಹಾಕುತ್ತಿದ್ದು, ಜಾಮೀನು, ಖರ್ಚುಗಳು, ಓಡಾಟದಿಂದ ಪೋಷಕರು ಕಂಗಾಲಾಗಿದ್ದಾರೆ. ಸದ್ಯ ಜಾಮೀನು ಸಿಗದೇ ಆರೋಪಿಗಳು ಜೈಲಿನಲ್ಲೆ ಇದ್ದಾರೆ.

ಮಹಿಳೆಯ ಘನತೆ, ಗೌರವಕ್ಕೆ ಧಕ್ಕೆಯಾಗುವಂತೆ ಪೋಸ್ಟ್ ಹಾಕಿದ್ದ ಆರೋಪಿಗಳು ಈಗ ಜಾಮೀನಿಗಾಗಿ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ. ರಮ್ಯಾ ವಿರುದ್ದ ಮನಬಂದಂತೆ ಪೋಸ್ಟ್ ಮಾಡಿದ್ದ ಆರೋಪಿಗಳನ್ನು ರಾಜ್ಯದ ಬೇರೆಬೇರೆ ಕಡೆಗಳಲ್ಲಿ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್​ಶೀಟ್ ತಯಾರಿಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ : ಬಿಗ್​ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ – ಕಿಚ್ಚನ ಮುಂದೆಯೇ ಅಬ್ಬರಿಸಿದ ಕರಾವಳಿ ಕುವರಿ!

 

Btv Kannada
Author: Btv Kannada

Read More