ಕೋಟಿ ಕೋಟಿ ವಂಚನೆ ಆರೋಪ – DAR DySP ನಂಜುಂಡಯ್ಯ ವಿರುದ್ಧ ಪ್ರಕರಣ ದಾಖಲು!

ನೆಲಮಂಗಲ : DAR DySP ನಂಜುಂಡಯ್ಯ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ ಕೇಳಿಬಂದಿದೆ. ಈ ಸಂಬಂಧ DySP ನಂಜುಂಡಯ್ಯ ಮೇಲೆ ನೆಲಂಮಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ DAR DySP ನಂಜುಂಡಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

DAR DySP ನಂಜುಂಡಯ್ಯ ಸಂಬಂಧಿಕರ ಬಳಿ 9 ಎಕರೆ ಜಮೀನು ಡೆವಲಪ್ ಮಾಡುವುದಾಗಿ ಹೇಳಿ ವಂಚನೆ ಮಾಡಿದ್ದಾನೆ. DySP ನಂಜುಂಡಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ವಂಚನೆಗೊಳಗಾದ ಕುಟುಂಬಗಳು ಠಾಣೆ ಮುಂದೆ ಜಮಾಯಿಸಿದ್ದಾರೆ. ಸಾಕಷ್ಟು ಜನರಿಗೆ ಸುಮಾರು 30-40 ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. DAR DySP ನಂಜುಂಡಯ್ಯ ಹಾಗೂ ಕುಟುಂಬ ಕೋಟಿ ಕೋಟಿ ರೂ. ವಂಚನೆಯಲ್ಲಿ ಭಾಗಿಯಾಗಿದ್ದಾರೆ.

ದೂರುದಾರರು
         ದೂರುದಾರರು

DySP ನಂಜುಂಡಯ್ಯ ಸಂಬಂಧಿಗಳಿಗೆ ಕೋಟಿ ಕೋಟಿ ವಂಚನೆ ಮಾಡಿದ್ದಾನೆ. ಮಾಲೀಕರ ಗಮನಕ್ಕೆ ಬರದಂತೆ ಸಹಿ ಫೋರ್ಜರಿ ಮಾಡಿ ಒಂದೇ ಸೈಟ್​ಗಳನ್ನ ಹಲವರಿಗೆ ಅಗ್ರಿಮೆಂಟ್ ಮಾಡಿದ್ದು, ಪ್ರಶ್ನೆ ಮಾಡಿದಕ್ಕೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಅಣ್ಣನ ಮಗ ಮೋಹನ್ ಎಂಬುವವರಿಗೆ ವಂಚನೆ ಮಾಡಿರುವ ಆರೋಪವಿದ್ದು, ಈಗಾಗಲೇ DySP ನಂಜುಂಡಯ್ಯ ಪ್ರಕರಣವೊಂದರಲ್ಲಿ ಸಸ್ಪೆಂಡ್​ ಆಗಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ನೆಲಂಮಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲಲ್ಲೇ ರೌಡಿಶೀಟರ್ ಬರ್ತ್​ಡೇ ಸೆಲೆಬ್ರೇಷನ್!

Btv Kannada
Author: Btv Kannada

Read More