ಕಲಬುರಗಿ : ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ!

ಕಲಬುರಗಿ : ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ತಾಲ್ಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ನಡೆದಿದೆ. ಶ್ರೀಮಂತ ಗೊನಕ್ಕಿ ಕೊಲೆಯಾದ ಯುವಕ.

ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಾಲಕನಾಗಿ ಕೆಲಸ ಮಾಡ್ತಿದ್ದ ಶ್ರೀಮಂತ್ ನಿನ್ನೆ ತಡರಾತ್ರಿ ಸ್ನೇಹಿತನ ಬರ್ತ್ಡೆ ಪಾರ್ಟಿ ಮಾಡೋದಕ್ಕೆ ಹೋಗಿದ್ದ. ಬರ್ತ್ಡೆ ಪಾರ್ಟಿಯಲ್ಲಿ ಗಲಾಟೆಯಾಗಿದ್ದು, ಈ ವೇಳೆ ಕಣ್ಣಿಗೆ ಖಾರದಪುಡಿ ಎರಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.

ಹತ್ತು ವರ್ಷದ ಹಳೆಯ ವೈಷಮ್ಯಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲಲ್ಲೇ ರೌಡಿಶೀಟರ್ ಬರ್ತ್​ಡೇ ಸೆಲೆಬ್ರೇಷನ್!

Btv Kannada
Author: Btv Kannada

Read More