ಬೆಂಗಳೂರು : 2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಕನ್ನಡ ಚಿತ್ರರಂಗದಲ್ಲಿ 2021ನೇ ಸಾಲಿನ ಅತ್ಯುತ್ತಮ ನಟ, ನಟಿ, ಸಿನಿಮಾ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳು ಅನೌನ್ಸ್ ಆಗಿವೆ.

“ಚಾರ್ಲಿ 777” ಚಿತ್ರಕ್ಕಾಗಿ ನಟ ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದು, “ಮ್ಯೂಟ್” ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಅರ್ಚನಾ ಜೋಯಿಸ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಣೆಯಾಗಿದೆ. ಇನ್ನು ದೊಡ್ಡಹಟ್ಟಿ ಬೈರೇಗೌಡ ಚಿತ್ರಕ್ಕೆ ಅತ್ಯುತ್ತಮ ಮೊದಲ ಚಿತ್ರ, ಯುವರತ್ನಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪಟ್ಟಿ :
- ಅತ್ಯುತ್ತಮ ಚಿತ್ರ – ದೊಡ್ಡಹಟ್ಟಿ ಬೋರೇಗೌಡ
- ದ್ವಿತೀಯ ಅತ್ಯುತ್ತಮ ಚಿತ್ರ – 777 ಚಾರ್ಲಿ
- ಮೂರನೇ ಅತ್ಯುತ್ತಮ ಚಿತ್ರ – ಬಿಸಿಲು ಕುದುರೆ
- ವಿಶೇಷ ಸಾಮಾಜಿಕ ಸಂದೇಶದ ಚಿತ್ರ – ಭಾರತದ ಪ್ರಜೆಗಳಾದ ನಾವು
- ಅತ್ಯುತ್ತಮ ಮನರಂಜನಾ ಚಿತ್ರ – ಯುವರತ್ನ
- ಅತ್ಯುತ್ತಮ ಮಕ್ಕಳ ಚಿತ್ರ – ಕೇಕ್
- ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ – ಬಡವ ರಾಸ್ಕಲ್
- ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ - ನಾಡ ಪೆದ ಆಶಾ (ಕೊಡವ ಭಾಷೆ)
- ಅತ್ಯುತ್ತಮ ನಟ – ರಕ್ಷಿತ್ ಶೆಟ್ಟಿ
- ಅತ್ಯುತ್ತಮ ಪೋಷಕ ನಟ – ಪ್ರಮೋದ್ (ರತ್ನನ್ ಪ್ರಪಂಚ)
- ಅತ್ಯುತ್ತಮ ಪೋಷಕ ನಟಿ – ಉಮಾಶ್ರೀ (ರತ್ನನ್ ಪ್ರಪಂಚ)
- ಅತ್ಯುತ್ತಮ ಕಥೆ – ಮಂಜುನಾಥ್ ಮುನಿಯಪ್ಪ
- ಅತ್ಯುತ್ತಮ ಚಿತ್ರಕಥೆ – ರಘು ಕೆ.ಎಂ (ದೊಡ್ಡಹಟ್ಟಿ ಬೋರೇಗೌಡ)
- ಅತ್ಯುತ್ತಮ ಸಂಭಾಷಣೆ – ಬರಗೂರು ರಾಮಚಂದ್ರಪ್ಪ (ತಾಯಿ ಕಸ್ತೂರ್ ಗಾಂಧಿ)
- ಅತ್ಯುತ್ತಮ ಛಾಯಾಗ್ರಹಣ – ಭುವನೇಶ್ ಪ್ರಭು (ಅಮ್ಮೆ ಸಂಸಾರ – ಕೊಂಕಣಿ)
- ಅತ್ಯುತ್ತಮ ಸಂಗೀತ ನಿರ್ದೇಶನ – ಇಮ್ತಿಯಾಜ್ ಸುಲ್ತಾನ್ (ಬಿಸಿಲು ಕುದುರೆ)
- ಅತ್ಯುತ್ತಮ ಸಂಕಲನ – ಪ್ರತೀಕ್ ಶೆಟ್ಟಿ (777 ಚಾರ್ಲಿ)
- ಅತ್ಯುತ್ತಮ ಬಾಲನಟ – ಮಾಸ್ಟರ್ ಅತೀಶ್ ಶೆಟ್ಟಿ (ಕೇಕ್)
- ಅತ್ಯುತ್ತಮ ಬಾಲನಟಿ – ಬೇಬಿ ಭೈರವಿ (ಭೈರವಿ)
- ಅತ್ಯುತ್ತಮ ಕಲಾ ನಿರ್ದೇಶನ – ರವಿ ಸಂತೇಹಕ್ಲು (ಭಜರಂಗಿ 2)
- ಅತ್ಯುತ್ತಮ ಗೀತ ರಚನೆ – ನಾಗಾರ್ಜುನ ಶರ್ಮಾ (777 ಚಾರ್ಲಿ ಚಿತ್ರದ ಮಡಿಲಿನಲ್ಲಿ ಕಡಲಿನಷ್ಟು ಹರಿಗಳಿದ್ದರು)
- ಅತ್ಯುತ್ತಮ ಹಿನ್ನೆಲೆ ಗಾಯಕ – ಅನೀಶ್ ಕೇಶವ ರಾವ್ (ಶ್ರೀ ಜಗನ್ನಾಥ ದಾಸರು-ರಾಮದೂತನ ಪಾದ)
- ಅತ್ಯುತ್ತಮ ಹಿನ್ನೆಲೆ ಗಾಯಕಿ – ಸಹನಾ ಎಂ ಭಾರದ್ವಾಜ್ (ದಂಡಿ – ಮುಗಿಲೇ ಮಾತಾಡು ಮನಸಾಗಿ)
- ತೀರ್ಪುಗಾರರ ವಿಶೇಷ ಪ್ರಶಸ್ತಿ – ಭೈರವಿ, ವಸ್ತ್ರವಿನ್ಯಾಸ (ಯೋಗಿ ಜಿ.ರಾಜ್ – ಭಜರಂಗಿ 2 ಮತ್ತು ಪ್ರಸಾದನ- ಶಿವಕುಮಾರ್ (ತಾಯಿ ಕಸ್ತೂರ್ ಗಾಂದಿ)
- ಅತ್ಯುತ್ತಮ ನಿರ್ಮಾಣ ನಿರ್ವಾಹಕ – ಶಿವಕುಮಾರ್ ಎಸ್ (ಶಿವಾರ್ಜುನ್) – ಪೊಗರು
ಇದನ್ನೂ ಓದಿ : ಬೆಂಗಳೂರಿನಲ್ಲಿ RDX ಇಟ್ಟಿರೋದಾಗಿ ಇ-ಮೇಲ್.. ಹೈಕೋರ್ಟ್ಗೂ ಬಾಂಬ್ ಬೆದರಿಕೆ!
Author: Btv Kannada
Post Views: 393







