ವಿಜಯಪುರ : ಲಾರಿಗೆ KSRTC ಬಸ್ ಡಿಕ್ಕಿಯಾದ ಪರಿಣಾಮ ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾದ ಘಟನೆ ದೇವರಹಿಪ್ಪರಗಿ ಪಟ್ಟಣದ ಹೊರವಲಯದಲ್ಲಿರುವ NH50ರಲ್ಲಿ ನಡೆದಿದೆ.

ಮೆಕ್ಕೆಜೋಳ ತುಂಬಿಕೊಂಡು ಹೋಗುವ ಲಾರಿಗೆ ಬಸ್ ಡಿಕ್ಕಿಯಾಗಿದ್ದು, ಘಟನಾ ಸ್ಥಳಕ್ಕೆ ದೇವರಹಿಪ್ಪರಗಿ ಪೋಲಿಸರು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ವಿಜಯಪುರ, ಸಿಂದಗಿ, ದೇವರಹಿಪ್ಪರಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಶಾಸಕ ಅಶೋಕ ಮನಗೂಳಿ ಕೂಡಾ ಭೇಟಿ ನೀಡಿದ್ದು, ಈ ಸಂಬಂಧ ದೇವರಹಿಪ್ಪರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅನೈತಿಕ ಸಂಬಂಧ : ಲಾಡ್ಜ್ನಲ್ಲಿ ಮಹಿಳೆ ಅನುಮಾನಾಸ್ಪದ ಸಾವು!
Author: Btv Kannada
Post Views: 307







