ಬೆಂಗಳೂರು : ಮಹಿಳೆಯ ಖಾಸಗಿ ವಿಡಿಯೋ, ಪೋಟೋ ಇಟ್ಕೊಂಡು ಬ್ಲಾಕ್ ಮೇಲ್ ಮಾಡಿ ಹಣ ಪಡೆದ ಆರೋಪದಡಿ ಇಬ್ಬರ ವಿರುದ್ಧ FIR ದಾಖಲಾಗಿದೆ. ಶೂಟ್ ಗಿರಿ ಹಾಗೂ ಸ್ವರೂಪ್ ಎಂಬುವವರ ವಿರುದ್ಧ FIR ದಾಖಲಾಗಿದ್ದು, ಶೂಟ್ ಗಿರಿ ರೌಡಿ ಅರಸಯ್ಯನ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದಾನೆ.

2022 ರಲ್ಲಿ ಸ್ವರೂಪ್ ಎಂಬಾತನಿಗೆ ಸಂತ್ರಸ್ತ ಮಹಿಳೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಳು. ನಂತರ ಮಹಿಳೆ ಬಳಿ ಕಷ್ಟ ಅಂತ ಹೇಳಿ 4 ಲಕ್ಷ ಹಣ ಪಡೆದಿದ್ದ. ಮಹಿಳೆ ಹಣ ವಾಪಸ್ ಕೇಳಿದಾಗ ಮಹಿಳೆಯ ಖಾಸಗಿ ಪೋಟೋ ಇಟ್ಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ಸ್ವರೂಪ್ ಬ್ಲಾಕ್ ಮೇಲ್ ಮಾಡಿ ಮತ್ತೆ 4 ಲಕ್ಷ ಹಣ ಪಡೆದಿದ್ದ. ನಂತರ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾದಾಗ ಶೂಟ್ ಗಿರಿ ಸೆಟಲ್ ಮೆಂಟ್ ಮಾಡೋದಾಗಿ ಹೇಳಿದ್ದಾನೆ.

ಆದರೆ ಸೆಟಲ್ ಮೆಂಟ್ ಮಾಡದೆ ಮತ್ತೆ ಮಹಿಳೆಯ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವಂತೆ ಶೂಟ್ ಗಿರಿ ಬೆದರಿಕೆ ಹಾಕಿದ್ದಾನೆ. ನಮ್ಮ ಹುಡುಗನ ತಂಟೆಗೆ ಬಂದರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿದ್ದ. ಸದ್ಯ ಇಬ್ಬರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.


ಇದನ್ನೂ ಓದಿ : ಲೋಕಾಯುಕ್ತ ರೇಡ್ನಲ್ಲಿ ಎಸ್ಕೇಪ್ ಆಗಿದ್ದ ದೇವನಹಳ್ಳಿ PSI ಜಗದೇವಿ ಜಾಮೀನು ಅರ್ಜಿ ವಜಾ!







