ಕಾಂತಾರ ಸಕ್ಸಸ್ ಆಗುವುದನ್ನು ಕಂಡು ಬೆಚ್ಚಿಬಿದ್ದ ಟ್ರಂಪ್ – ಡಬಲ್ ಟ್ಯಾಕ್ಸ್ ಘೋಷಣೆ!

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಬಿಗ್ ಬಜೆಟ್ ಸಿನಿಮಾ “ಕಾಂತಾರ: ಅಧ್ಯಾಯ 1″ಗೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಇದೇ ಅ. 2 ರಂದು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಚಿತ್ರ ರಿಲೀಸ್​ಗೆ ರೆಡಿಯಾಗಿದೆ. ಇದೀಗ ಕಾಂತಾರ ಸಕ್ಸಸ್ ಆಗುವುದನ್ನು ಕಂಡು ಬೆಚ್ಚಿಬಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಡಬಲ್ ಟ್ಯಾಕ್ಸ್ ಘೋಷಣೆ ಮಾಡಿದ್ದಾರೆ.

ಹೌದು.. “ಕಾಂತಾರ: ಅಧ್ಯಾಯ 1” ರಿಲೀಸ್​ಗೆ ಕೌಂಟ್​ಡೌನ್​ ಶುರುವಾಗಿದ್ದು, ಈ ಹೊತ್ತಲ್ಲೇ ಅಮೆರಿಕದಿಂದ ಡೊನಾಲ್ಡ್‌ ಟ್ರಂಪ್‌ ಕಾಂತಾರ ಸೇರಿದಂತೆ ಭಾರತದ ಎಲ್ಲಾ ಸಿನಿಮಾಗಳಿಗೂ ಎಫೆಕ್ಟ್‌ ಆಗುವ ರೀತಿಯ ನಿರ್ಧಾರ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಟ್ರಂಪ್, ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದು, ಅಮೆರಿಕದ ಚಲನಚಿತ್ರೋದ್ಯಮವನ್ನು ವಿದೇಶಗಳು ಕಳ್ಳತನ ಮಾಡಿವೆ ಎಂದು ಹೇಳಿಕೊಂಡಿದ್ದು, ಈ ಪರಿಸ್ಥಿತಿಯನ್ನು “ಮಗುವಿನಿಂದ ಕ್ಯಾಂಡಿ ಕದಿಯುವುದಕ್ಕೆ ಹೋಲಿಸಿದ್ದಾರೆ.

ಕಾಂತಾರ ಸಿನಿಮಾ ರಿಲೀಸ್‌ ಆದಾಗ ಕನ್ನಡಿಗರು ಹಾಗೂ ಭಾರತೀಯರು ಮಾತ್ರವಲ್ಲದೆ ವಿದೇಶದ ಕನ್ನಡಿಗರಿಂದಲೂ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಮೆರಿಕದಲ್ಲೂ ಸಿನಿಮಾಗೆ ಸಖತ್‌ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಕಾಂತಾರ ಅಧ್ಯಾಯ 1 ಸಿನಿಮಾಗೂ ಇದೇ ರೀತಿಯ ರೆಸ್ಪಾನ್ಸ್‌ನ ನಿರೀಕ್ಷೆಯಲ್ಲಿ ಚಿತ್ರತಂಡವಿತ್ತು.

ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, “ದೀರ್ಘಕಾಲದ, ಎಂದಿಗೂ ಮುಗಿಯದ ಸಮಸ್ಯೆ” ಪರಿಹರಿಸಲು, ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ನಿರ್ಮಿಸಲಾದ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕವನ್ನು ಘೋಷಣೆ ಮಾಡಿದ್ದಾರೆ. ಅವರ ಗಮನ ಹಾಲಿವುಡ್ ಮೇಲೆ ಇದ್ದರೂ, ಈ ಘೋಷಣೆಯು ಎಲ್ಲಾ ವಿದೇಶಿ ಚಲನಚಿತ್ರಗಳನ್ನು ಗುರಿಯಾಗಿಸಿಕೊಂಡಿರುವುದರಿಂದ ಭಾರತೀಯ ಸಿನಿಮಾ ಕೂಡ ಅದರ ಪರಿಣಾಮವನ್ನು ಅನುಭವಿಸಲಿದೆ. ‘ಮೇಕ್‌ ಅಮೆರಿಕಾ ಗ್ರೇಟ್‌ ಅಗೇನ್‌’ ಎನ್ನುವ ಘೋಷಣೆಯೊಂದಿಗೆ ತಮ್ಮ ಪೋಸ್ಟ್‌ ಮುಕ್ತಾಯಗೊಳಿಸಿದ್ದಾರೆ.

ಭಾರತೀಯ ಸಿನಿಮಾಗಳಿಗೆ ಅಮೆರಿಕ ದೊಡ್ಡ ಮಾರುಕಟ್ಟೆ : ಭಾರತೀಯ ಸಿನಿಮಾಗಳಿಗೆ ಅಮೆರಿಕ ಒಂದು ಪ್ರಮುಖ ಮಾರುಕಟ್ಟೆಯಾಗಿದೆ. ಉದ್ಯಮದ ಮೂಲಗಳು ಅಂದಾಜಿನ ಪ್ರಕಾರ ಇದು ವಿದೇಶಿ ಕಲೆಕ್ಷನ್‌ನಲ್ಲಿ 30–40% ರಷ್ಟಿದೆ ಮತ್ತು ತೆಲುಗು ಚಿತ್ರಗಳಿಗೆ, ತೆಲಂಗಾಣದ ನಂತರ ಎರಡನೇ ಅತಿದೊಡ್ಡ ಅಂತರರಾಷ್ಟ್ರೀಯ ಮಾರುಕಟ್ಟೆಯಾಗಿದೆ. ದೊಡ್ಡ ಟಿಕೆಟ್ ತೆಲುಗು ಬಿಡುಗಡೆಗಳು ತಮ್ಮ ಬಾಕ್ಸ್ ಆಫೀಸ್ ಗಳಿಕೆಯ 25% ವರೆಗೆ ಅಮೆರಿಕದಿಂದಲೇ ಪಡೆಯುತ್ತಿತ್ತು. ಈ ಚಲನಚಿತ್ರಗಳು ಸಾಮಾನ್ಯವಾಗಿ ದೇಶಾದ್ಯಂತ 700–800 ಸ್ಥಳಗಳಲ್ಲಿ ಬಿಡುಗಡೆಯಾಗುತ್ತವೆ.

ಇದನ್ನೂ ಓದಿ : ಕಲರ್ಸ್ ಕನ್ನಡದಲ್ಲಿ ಬರ್ತಿದೆ ವಿನೂತನ ಧಾರಾವಾಹಿ ‘ಶ್ರೀ ಗಂಧದ ಗುಡಿ’ – ಮನೆಗೆ ಬಂದ ಸೊಸೆ ಮನಸ್ಥಿತಿ-ಮನೆಸ್ಥಿತಿ ಬದಲಾಯಿಸ್ತಾಳಾ?

Btv Kannada
Author: Btv Kannada

Read More