ನೆಲಮಂಗಲ : ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಹಲವೆಡೆ ಮನೆಗಳು ಕುಸಿಯುವ ಪ್ರಕರಣಗಳು ಪದೇ ಪದೇ ಸಾರ್ವಜನಿಕರನ್ನು ಭಯಭೀತವಾಗಿಸುತ್ತಿವೆ. ಈಗ ರಾತ್ರೋರಾತ್ರಿ ನೆಲಮಂಗಲದ ಮಾದಾವಾರ ಗ್ರಾಮದಲ್ಲಿ ಮೂರು ಅಂತಸ್ಥಿನ ಕಟ್ಟಡ ವಾಲಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ಎರಡು ವರ್ಷದ ಹಿಂದೆ ನಿರ್ಮಾಣವಾಗಿದ್ದ ಕಟ್ಟಡ ಏಕಾಏಕಿ ವಾಲಿದ್ದು, 6 ಮನೆಗಳಲ್ಲಿ ಇದ್ದ ಬಾಡಿಗೆದಾರರು ಆತಂಕಗೊಂಡು ಕ್ಷಣದಲ್ಲೇ ಖಾಲಿ ಮಾಡಿದ್ದಾರೆ. ಮನೆಯ ಕೆಳಗೆ ಮಣ್ಣು ಕುಸಿದಿದ್ದರಿಂದ ಕಟ್ಟಡ ವಾಲಿದೆ.

ಇನ್ನೂ ಕಟ್ಟಡ ವಾಲಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾದನಾಯಕನಹಳ್ಳಿ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮನೆಯಲ್ಲಿದ್ದ ಎಲ್ಲಾ ಬಾಡಿಗೆದಾರರನ್ನು ಸ್ಥಳಾಂತರ ಮಾಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.
ಇದನ್ನೂ ಓದಿ : ಇನ್ನೋವಾ ಕಾರು-ಟಂಟಂ ಮುಖಾಮುಖಿ ಡಿಕ್ಕಿ – ಇಬ್ಬರ ದುರ್ಮರಣ!
Author: Btv Kannada
Post Views: 387







