ಉಡುಪಿ : ಹಾಡುಹಗಲೇ ರೌಡಿಶೀಟರ್ ಸೈಫುದ್ದೀನ್ನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉಡುಪಿಯ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡವೂರು ಬಳಿ ನಡೆದಿದೆ.

ಇಂದು ಬೆಳಗ್ಗೆ 10.30ಕ್ಕೆ ಕೊಡವೂರು ಸಮೀಪದ ಸಾಲ್ಮರ ಎಂಬಲ್ಲಿರುವ ಸೈಫ್ ಮನೆಗೆ ನುಗ್ಗಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಮೂರು ಜನ ಆರೋಪಿಗಳು ಏಕಾಏಕಿ ಅಟ್ಯಾಕ್ ಮಾಡಿದ್ದು, ಆರೋಪಿಗಳು ಸೈಫ್ ಮಾಲೀಕತ್ವದ ಎಕೆಎಂಎಸ್ ಖಾಸಗಿ ಬಸ್ ಸಂಸ್ಥೆಯ ಉದ್ಯೋಗಿಗಳಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಸೈಫುದ್ದೀನ್ ಮೇಲೆ 18 ಕೇಸ್‌ಗಳಿದ್ದು, ಉಡುಪಿ, ಹಿರಿಯಡ್ಕ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಎರಡು ಕೊಲೆ ಪ್ರಕರಣದಲ್ಲಿ ನೇರ ಆರೋಪಿಯಾಗಿದ್ದಾನೆ.
ಇದನ್ನೂ ಓದಿ : ಕರುನಾಡನ್ನು ಬಿಂಬಿಸುವ ಬಿಗ್ಬಾಸ್ ಅರಮನೆ – ʻಅಸಲಿ ಹಬ್ಬ ಇವಾಗ ಶುರುʼ ದೊಡ್ಡ ಸಿಗ್ನಲ್ ಕೊಟ್ಟ ಕಿಚ್ಚ ಸುದೀಪ್!
Author: Btv Kannada
Post Views: 398







