ಮಂಗಳೂರು : ಬಿಜೆಪಿ ಮುಖಂಡನ ಪುತ್ರನ ಲವ್, ಸೆಕ್ಸ್, ಧೋಖಾ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಸಹಪಾಠಿಯನ್ನೇ ಪ್ರೀತಿಸಿ, ಮಗು ಕರುಣಿಸಿದ್ದ ಆರೋಪಿ ಕೃಷ್ಣ ಜೆ ರಾವ್ ಕುಟುಂಬ DNA ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿತ್ತು, ಇದೀಗ ಕೃಷ್ಣ ಜೆ ರಾವ್ ಡಿಎನ್ಎ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ.
ಈ ಬಗ್ಗೆ ಸಂತ್ರಸ್ತೆಯ ಪರವಾಗಿ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಮಾತನಾಡಿ, ಸದ್ಯ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿ ಕೃಷ್ಣ ಜೆ ರಾವ್ ಕೂಡಲೇ ಸಂತ್ರಸ್ತೆಯ ಜೊತೆ ಮದುವೆ ಮಾಡಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಆರೋಪಿ ಕೃಷ್ಣ ಜೆ ರಾವ್ DNA ಟೆಸ್ಟ್ ರಿಪೋರ್ಟ್ನಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಬಿಜೆಪಿ ಮುಖಂಡರೊಬ್ಬರ ಪುತ್ರನಾಗಿರುವ ಕೃಷ್ಣ ಜೆ ರಾವ್ ಮದುವೆಯಾಗುವುದಾಗಿ ನಂಬಿಸಿ ಬಳಿಕ ಗರ್ಭಾವತಿಯನ್ನಾಗಿ ಮಾಡಿ ವಂಚಿಸಿದ್ದಾನೆ. ಸಂತ್ರಸ್ತೆ ಕುಟುಂಬ ಮೂರು ತಿಂಗಳಿನಿಂದ ನ್ಯಾಯಕ್ಕಾಗಿ ಹೋರಾಡುತ್ತಿದೆ ಎಂದಿದ್ದಾರೆ.

ಪುತ್ತೂರು ನ್ಯಾಯಾಧೀಶರ ಮುಂದೆ ರಕ್ತ ಸಂಗ್ರಹ ನಡೆದಿತ್ತು. ಆರೋಪಿ ಕೃಷ್ಣ ಜೆ ರಾವ್, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಸಂಗ್ರಹಿಸಲಾಗಿತ್ತು. ಬಳಿಕ ಬೆಂಗಳೂರಿಗೆ ಪ್ರಯೋಗಾಲಯಕ್ಕೆ ರಕ್ತ ಸಂಗ್ರಹ ಮಾದರಿಯನ್ನ ಕಳುಹಿಸಲಾಗಿತ್ತು. ಆರೋಪಿ ಕೃಷ್ಣ ಜೆ ರಾವ್ ಕುಟುಂಬ DNA ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿತ್ತು. ಇದೀಗ ಡಿDNA ಟೆಸ್ಟ್ ನಲ್ಲಿ ಆರೋಪಿ ಕೃಷ್ಣ ಜೆ ರಾವ್ ಪಾಸಿಟಿವ್ ಪತ್ತೆಯಾಗಿದೆ. ಆರೋಪಿ ಕೃಷ್ಣ ಜೆ ರಾವ್ನಿಂದಲೇ ಸಂತ್ರಸ್ತೆ ಗರ್ಭಾವತಿಯಾಗಿರುವುದು ಸಾಬೀತಾಗಿದೆ ಎಂದು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದ್ದಾರೆ.
ಹಿಂದೂ ಸಂಘಟನೆಯೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸಬೇಕು, ನಮಗೆ ಕಾನೂನಿ ಹೋರಾಟಕ್ಕೆ ಇಷ್ಟವಿಲ್ಲ. ಇಬ್ಬರು ಒಂದಾಗಿ ಬಾಳಬೇಕು ಎಂಬುದು ನಮ್ಮ ಇಚ್ಛೆ, ಹಿಂದುತ್ವದ ಭದ್ರಕೋಟೆ ಪುತ್ತೂರಿನಲ್ಲಿರುವ ಹಿಂದೂ ಮುಖಂಡರ ಮುಂದೆ ಬರಬೇಕು. ಎರಡೂ ಕುಟುಂಬಗಳನ್ನ ಒಂದು ಮಾಡುವ ಕೆಲಸ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ಮೂಲದ ವಿ.ಸಿ. ಸಜ್ಜನರ ಹೈದರಾಬಾದ್ ಪೊಲೀಸ್ ಕಮಿಷನರ್ ಆಗಿ ನೇಮಕ!







