ಪೂಜೆ ನೆಪದಲ್ಲಿ ಚಿನ್ನಾಭರಣ ಕಳ್ಳತನ ಆರೋಪ – ಅರ್ಚಕ ರಮೇಶ್ ಶಾಸ್ತ್ರಿ ವಿರುದ್ಧ ದೂರು ದಾಖಲು!

ಬೆಂಗಳೂರು : ಅಗ್ರಹಾರ ದಾಸರಹಳ್ಳಿಯ ಮುನೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ರಮೇಶ್ ಶಾಸ್ತ್ರಿ ವಿರುದ್ಧ ಚಿನ್ನಾಭರಣ ಕದ್ದಿರುವ ಗಂಭಿರ ಆರೋಪ ಕೇಳಿಬಂದಿದೆ. ಪೂಜೆ ನೆಪದಲ್ಲಿ ಅರ್ಚಕ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ಅಶೋಕ್ ಚಂದರಗಿ ಎಂಬುವವರು ದೂರು ನೀಡಿದ್ದಾರೆ.

ವರಮಹಾಲಕ್ಷ್ಮಿ ಪೂಜೆ ಜೊತೆಗೆ ಸತ್ಯನಾರಾಯಣ ಪೂಜೆ ಮಾಡ್ತೀನಿ, ಒಂದು ದಿನ ಮನೆಯಲ್ಲಿ ಉಳಿದುಕೊಂಡು ಪೂಜೆ ಮುಂದುವರೆಸುತ್ತೇನೆ ಎಂದು ರಮೇಶ್ ಶಾಸ್ತ್ರಿ ಹೇಳಿದ್ದರು. ಹೀಗಾಗಿ ದಂಪತಿ ಮನೆಯಲ್ಲಿಯೇ ಅರ್ಚಕರಿಗೆ ವಾಸದ ವ್ಯವಸ್ಥೆ ಮಾಡಿದ್ದರು. ಸತ್ಯನಾರಾಯಣ ದೇವರ ವಿಗ್ರಹಕ್ಕೆ ಚಿನ್ನಾಭರಣ ಹಾಕಲಾಗಿತ್ತು. ರಮೇಶ್ ಶಾಸ್ತ್ರಿ ವರಮಹಾಲಕ್ಷ್ಮಿ ಪೂಜೆ ಹಾಗೂ ಸತ್ಯನಾರಾಯಣ ಪೂಜೆ ಮುಗಿಸಿ ಮಾರನೆ ದಿನ ಸಂಜೆ ಮನೆಯಿಂದ ಹೋಗಿದ್ದರು. ನಂತರ ಚಿನ್ನಾಭರಣ ಪರಿಶೀಲನೆ ಮಾಡಿದಾಗ ನೆಕ್ಲೆಸ್ ನಾಪತ್ತೆಯಾಗಿತ್ತು.

ನಾಲ್ಕು ಲಕ್ಷ ಮೌಲ್ಯದ 44 ಗ್ರಾಂ ಚಿನ್ನಾಭರಣ ಕಳುವಾಗಿತ್ತು. ಹಾಗಾಗಿ ಅರ್ಚಕರನ್ನ ಕೇಳಿದಾಗ ತನಗೆ ಗೊತ್ತಿಲ್ಲ ಎಂದಿದ್ದರು. ಹುಡುಕಾಟದ ಬಳಿಕ ಶಂಕೆ ಹಿನ್ನಲೆ ಅರ್ಚಕ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಮಾದಕ ವಸ್ತು ಖರೀದಿ ಆರೋಪ – ನಟಿ ಸಂಜನಾ ಗರ್ಲಾನಿಗೆ ಸುಪ್ರೀಂಕೋರ್ಟ್​ನಿಂದ ಬಿಗ್ ಶಾಕ್!

Btv Kannada
Author: Btv Kannada

Read More