ನಮ್ಮ ಮೇಲಿರುವ ಕೇಸ್​ ವಾಪಸ್ ಪಡೆಯಿರಿ.. ಇಲ್ಲದಿದ್ರೆ ಕರ್ನಾಟಕ ಹೊತ್ತಿ ಉರಿಯುತ್ತೆ – ಸರ್ಕಾರಕ್ಕೆ ಕರವೇ ನಾರಾಯಣಗೌಡ ವಾರ್ನಿಂಗ್!

ಬೆಂಗಳೂರು : ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಸಭೆಯನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಬೆಂಗಳೂರಿನ ತಾಜ್ ವೆಸ್ಟೆಂಡ್‌ ಹೋಟೆಲ್​ಗೆ ನುಗ್ಗಿ ಪ್ರತಿಭಟಿಸಿದ್ದರು. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯ 41 ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದೀಗ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಇದೀಗ ಕಾರ್ಯಕರ್ತರ ಬಂಧನವನ್ನು ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಖಂಡಿಸಿ ಬೆಂಗಳೂರು ಗಾಂಧಿನಗರದ ಕರವೇ ಕಚೇರಿಯಲ್ಲಿ ಆಕ್ರೋಶಭರಿತ ಸುದ್ದಿಗೋಷ್ಠಿ ನಡೆಸಿದ್ದಾರೆ.

ಈ ಬಗ್ಗೆ ಕರವೇ ಅಧ್ಯಕ್ಷ ನಾರಾಯಣಗೌಡ ಪ್ರತಿಕ್ರಿಯಿಸಿ, ಕನ್ನಡಿಗರ ಆತ್ಮಗೌರವಕ್ಕಾಗಿ ಹೋರಾಡಿದ ಕರವೇ ಕಾರ್ಯಕರ್ತರನ್ನು ಬಂಧಿಸಿರುವ ರಾಜ್ಯ ಸರ್ಕಾರದ ದ್ರೋಹಿ ನಡೆಗೆ ಭಾರೀ ಖಂಡನೆ ವ್ಯಕ್ತಪಡಿಸಿದರು. ಕನ್ನಡಿಗರ ಹಕ್ಕಿಗೆ ಧಕ್ಕೆ ತರಲು ಹೊರಟವರ ಯೋಜನೆಗಳು ಕರವೇ ಹೋರಾಟದ ಬಿರುಗಾಳಿಯಲ್ಲಿ ಧ್ವಂಸವಾಗುತ್ತವೆ ಎಂದು ಕೇಂದ್ರ ಸರ್ಕಾರದ ಬಲವಂತದ ಹಿಂದಿ ಹೇರಿಕೆ ವಿರುದ್ಧ ಕೆಂಡ ಕಾರಿದ್ದಾರೆ.

ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು, ಇಲ್ಲವಾದರೆ ಕರ್ನಾಟಕವೇ ಹೋರಾಟದ ಜ್ವಾಲೆಯಿಂದ ಹೊತ್ತಿ ಉರಿಯುತ್ತದೆ. ಕರವೇ ಹೋರಾಟ ಶಮನವಾಗದು, ಕನ್ನಡಿಗರ ಗೌರವವೇ ನಮ್ಮ ಅಸ್ತ್ರ ಎಂದು ಸರ್ಕಾರಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸ್ತೇನೆ, SIT ರಚಿಸಿದ ಕಾರಣ ಸತ್ಯ ಹೊರಬರ್ತಿದೆ – ಡಾ. ವೀರೇಂದ್ರ ಹೆಗ್ಗಡೆ!

Btv Kannada
Author: Btv Kannada

Read More