ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಿದ ಬಿಜೆಪಿ ಮುಖಂಡರ ವಿರುದ್ಧ FIR – ವಿಚಾರಣೆಗೆ ಹಾಜರಾಗುವಂತೆ ಪೊಲೀಸರ ನೋಟಿಸ್!

ಬೆಂಗಳೂರು : ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿದ ವಿಜಯನಗರದ ಬಿಜೆಪಿ ಮುಖಂಡರಾದ ಉಮೇಶ್ ಶೆಟ್ಟಿ, ಮಂಜುನಾಥ್, ಗಂಗಮ್ಮ ಸೇರಿ ಹಲವರ ವಿರುದ್ಧ FIR ದಾಖಲಾಗಿದೆ. ಎಎಸ್​​ಐ ಖಾಜಾ ಅಜೀರ್ ದೂರಿನನ್ವಯ ಗೋವಿಂದರಾಜನಗರ ಠಾಣೆಯಲ್ಲಿ FIR ದಾಖಲಾಗಿದ್ದು, ಬಿಜೆಪಿ ಮುಖಂಡರಿಗೆ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದಾರೆ.

ವಿಜಯನಗರ, ಎಂ.ಸಿ.ಲೇಔಟ್, ನಾಗರಭಾವಿ ಮುಖ್ಯ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಮುಂಭಾಗ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ನೇತೃತ್ವದಲ್ಲಿ ಸುಮಾರು 20 ರಿಂದ 25 ಜನರ ಗುಂಪು ಸೇರಿಕೊಂಡು ಗುಂಡಿ ಮುಚ್ಚುವ ಸಲುವಾಗಿ ಏಕಾಏಕಿ ಪ್ರತಿಭಟನೆ ಪ್ರಾರಂಬಿಸಿದ್ದರು. ಈಗಿನ ಸರ್ಕಾರ ಸಾರ್ವಜನಿಕ ರಸ್ತೆ ಗುಂಡಿಗಳನ್ನು ಅಗೆದು ನಂತರ ಮುಚ್ಚದೆ ಹಾಗೇಯೇ ಬಿಟ್ಟು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ ಈ ಕಾರಣ ಪ್ರತಿಭಟನೆ ಮಾಡುತ್ತಿರುವುದಾಗಿ ಬಿಜೆಪಿ ನಾಯಕರು ತಿಳಿಸಿದ್ದರು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಸಂಬಂಧ ಗೋವಿಂದರಾಜನಗರ ಠಾಣೆ ಎಎಸ್​​ಐ ಖಾಜಾ ಅಜೀರ್ ದೂರು ನೀಡಿದ್ದರು.

ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಮುಖಂಡರನ್ನು ಪೊಲೀಸರು ಪ್ರಶ್ನೆ ಮಾಡಿದ್ದರು. ನೀವು ಇಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇರುವುದಿಲ್ಲ, ಯಾವುದೇ ಪ್ರತಿಭಟನೆ ಮಾಡುವುದಿದ್ದಲ್ಲಿ ಫ್ರೀಡಂ ಪಾರ್ಕ್‌ ನಲ್ಲಿ ಮಾಡಬೇಕು ಎಂದು ಉಚ್ಚ ನ್ಯಾಯಾಲಯದ ಆದೇಶದ ಪ್ರತಿ ತೋರಿಸಿದ್ರು. ಆದ್ರೂ ಬಿಜೆಪಿ ನಾಯಕರು ಕೇಳದೇ ಇದೇ ಸ್ಥಳದಲ್ಲಿ ಪ್ರತಿಭಟನೆ ಮಾಡುವುದಾಗಿ ಕೇಸರಿ ಪಡೆದ ಪ್ರತಿಭಟನೆ ಮಾಡಲು ಪ್ರಾರಂಭಿಸಿತು. ಪ್ರತಿಭಟನೆಯಲ್ಲಿ ತೊಡಗಿದ್ದ ಬಿಜೆಪಿಯ ಉಮೇಶ್ ಶೆಟ್ಟಿ ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ದಿಢೀರ್​ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ASI ಖಾಜಾ  ದೂರು ನೀಡಿದ್ದರು. ಈ ಸಂಬಂಧ ಬೆಂಗಳೂರು ನಗರ ಗೋವಿಂದರಾಜನಗರ ಠಾಣೆಯಲ್ಲಿ BNS. 372/2025 500. 189(2), 192(2), (3), 190, 223, 292, 285, 103 KP ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಿಜೆಪಿ ಮುಖಂಡರು ವಿಚಾರಣೆಗೆ ಹಾಜರಾಗಲು ಗೋವಿಂದರಾಜನಗರ ಠಾಣೆ ಪೊಲೀಸರು ನೋಟಿಸ್ ನೀಡಿದ್ದು  ವಿಚಾರಣೆಗೆ ತಪ್ಪಿದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ : ಮಹಿಳೆ ಮೇಲೆ “ಮಾರ್ವಾಡಿ” ಗ್ಯಾಂಗ್ ವಿಕೃತಿ ಕೇಸ್ – ಕಿರಾತಕರ ವಿರುದ್ಧ ಕಠಿಣ ಕ್ರಮಕ್ಕೆ ಮಹಿಳಾ ಆಯೋಗ ಮನವಿ!

Btv Kannada
Author: Btv Kannada

Read More