ಬಾಗಲಕೋಟೆ : ಖಾಸಗಿ ಪಿಜಿಯೊಂದರಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಿನ್ನೆ ಸಂಜೆ ನಡೆದಿದೆ. 17 ವರ್ಷದ ಸೀಮಾ ರಾಠೋಡ ಮೃತ ವಿದ್ಯಾರ್ಥಿನಿ.

ಮೃತ ವಿದ್ಯಾರ್ಥಿನಿ ವಾಗ್ದೇವಿ ಪಿಯು ಕಾಲೇಜ್ ಪ್ರಥಮ ವರ್ಷ ಸೈನ್ಸ್ ಓದುತ್ತಿದ್ದಳು. ಸೀಮಾ ನೇಣು ಹಾಕಿಕೊಂಡ ದೃಶ್ಯ ಕಂಡು ವಿದ್ಯಾರ್ಥಿನಿಯರು ಓಡೋಡಿ ಹೋಗಿದ್ದು, ಘಟನಾ ಸ್ಥಳದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶವಾಗಾರದ ಮುಂದೆ ಮೃತ ಸೀಮಾ ಕುಟುಂಬಸ್ಥರ ಕಣ್ಣೀರು ಹಾಕಿದ್ದಾರೆ. ಮಗಳ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಸಾವಿನಲ್ಲಿ ಸಂಶಯವಿದೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ನವನಗರ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಫರ್ನಿಚರ್ ಶಾಪ್‍ನಲ್ಲಿ ಭಾರೀ ಅಗ್ನಿ ಅವಘಡ – 5 ಕೋಟಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ!
Author: Btv Kannada
Post Views: 309







