ಇಂದಿನಿಂದ 5 ದಿನ ಕಾವೇರಿ ಆರತಿ – ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಕೆಆ‌ರ್‌ಎಸ್!

ಮಂಡ್ಯ : ಡಿಸಿಎಂ ಡಿ.ಕೆ ಶಿವಕುಮಾರ್ ಕನಸಿನ ಕಾರ್ಯಕ್ರಮ `ಕಾವೇರಿ ಆರತಿ’ಗೆ ಇಂದು (ಸೆ.26) ಚಾಲನೆ ಸಿಗಲಿದೆ. ಇಂದಿನಿಂದ 5 ದಿನಗಳ ಕಾಲ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ.

KRS ಬೋಟಿಂಗ್ ಪಾಯಿಂಟ್‍ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6:00 ಗಂಟೆಗೆ ಡಿ.ಕೆ ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ತರಬೇತಿ ಪಡೆದ 12-13 ಸ್ಥಳೀಯ ಪುರೋಹಿತರು ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ನೆರವೇರಿಸಲಿದ್ದಾರೆ.

ಕಾವೇರಿ ಆರತಿ ವೀಕ್ಷಣೆಗೆ ರಾಜ್ಯ, ಹೊರರಾಜ್ಯ ಸೇರಿದಂತೆ 8 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆ ಇದೆ. ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಸಾದವಾಗಿ ಲಾಡು ವಿತರಣೆಗೆ ಸಿದ್ಧತೆ ಮಾಡಲಾಗಿದೆ. ಕಾವೇರಿ ಆರತಿ ಹಿನ್ನೆಲೆ ಕೆಆರ್‍ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಲಾಗಿದೆ. ಟೋಲ್ ಸಂಗ್ರಹದಲ್ಲೂ ವಿನಾಯಿತಿ ನೀಡಲಾಗಿದೆ. 5 ದಿನಗಳ ಕಾಲ ಟಿಕೆಟ್ ಹಾಗೂ ಟೋಲ್ ಇರುವುದಿಲ್ಲ.

ಇದನ್ನೂ ಓದಿ : ‘ಗಾರ್ಡನ್’ ಸಿನಿಮಾಗೆ ಅದ್ಧೂರಿ ಮುಹೂರ್ತ – ಟಕ್ಕರ್ ಮನೋಜ್ ಚಿತ್ರಕ್ಕೆ ಶುಭಕೋರಿದ ದಿನಕರ್ ತೂಗುದೀಪ!

Btv Kannada
Author: Btv Kannada

Read More