ಸೀರೆ ಕದ್ದ ಮಹಿಳೆಗೆ ಬೂಟುಗಾಲಿನಿಂದ ಒದ್ದು ದರ್ಪ – ಗೃಹ ಮಂತ್ರಿಗಳೇ.. ವಿಕೃತಿ ಮೆರೆದ ಅಂಗಡಿ ಮಾಲೀಕ ಬಾಬುಲಾಲ್​ನ ಅರೆಸ್ಟ್ ಮಾಡಿ!

ಬೆಂಗಳೂರು : ಸೀರೆ ಕದ್ದಿದ್ದಾಳೆಂದು ಆರೋಪಿಸಿ ಮಹಿಳೆಯೊಬ್ಬರಿಗೆ ಅಂಗಡಿ ಮಾಲೀಕ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಅಂಗಡಿ ಮಾಲೀಕ ಹಾಡಹಗಲೇ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ ಮಹಿಳೆಗೆ ಬೂಟುಗಾಲಿನಿಂದ ಒದ್ದು ಅಮಾನವೀಯವಾಗಿ ನಡೆದುಕೊಂಡಿದ್ದಾನೆ.

ಸೀರೆ ಅಂಗಡಿ ಮಾಲೀಕ ಬಾಬುಲಾಲ್
ಸೀರೆ ಅಂಗಡಿ ಮಾಲೀಕ ಬಾಬುಲಾಲ್

ಮಾಲೀಕ ಮಾತ್ರವಲ್ಲದೇ ಅಂಗಡಿ ಸಿಬ್ಬಂದಿ ಸಹ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೋವಿನಿಂದ ಮಹಿಳೆ ಕಿರುಚಾಡಿ ಅಂಗಲಾಚಿದ್ರು ಸಹ ಬಿಟ್ಟಿಲ್ಲ. ಮಹಿಳೆಯನ್ನು ಎಳೆದಾಡಿ ಖಾಸಗಿ ಅಂಗಕ್ಕೆ ಮಾಲೀಕ ಒದ್ದಿದ್ದಾನೆ. ಹಲ್ಲೆ ಮಾಡಿದ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಅಂಗಡಿ ಮಾಲೀಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದವನ ಹೆಸರು ಬಾಬುಲಾಲ್, ಈತ ಅವೆನ್ಯೂ ರಸ್ತೆಯಲ್ಲಿ ಸೀರೆ ಮಾರಾಟ ಮಾಡ್ತಾನೆ. ಈತ ನೂರು ರೂಪಾಯಿ ಸೀರೆ ತಂದು ಸಾವಿರ ರೂಪಾಯಿಗೆ ಮಾರುವ ಕಳ್ಳ ದಂಧೆ ನಡೆಸ್ತಾನೆ. ಅವಿನ್ಯೂ ರಸ್ತೆಯಲ್ಲಿ ಬಾಬುಲಾಲ್ ಡಾನ್, ಈತನ ಸುತ್ತಮುತ್ತ ಇರುವವರು ಎಲ್ಲರೂ ಮಾರ್ವಾಡಿಗಳೇ. ಅಲ್ಲಿ ಮಾರ್ವಾಡಿಗಳ ರೌಡಿಗಳ ಗುಂಪನ್ನು ಕಟ್ಟಿಕೊಂಡಿದ್ದಾನೆ.

ಮಹಿಳೆ ರಕ್ಷಣೆಗೆ ನಿಲ್ಲಬೇಕಿದ್ದ ಪೊಲೀಸರು ಕ್ರಮ ಕೈಗೊಂಡಿಲ್ಲ. ಪೂರ್ವಾಪರ ವಿಚಾರಿಸದೇ ಮಹಿಳೆಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹಲ್ಲೆಗೊಳಗಾದ ಮಹಿಳೆ ದೂರು ನೀಡಲು ಮುಂದಾದರೂ ಕಳ್ಳತನದ ಕೇಸ್ ಹಾಕಿ ಮಹಿಳೆಯನ್ನೇ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಮಹಿಳೆ ಎಳೆದಾಡಿ ಹಲ್ಲೆ ಮಾಡಿದವರ ಮೇಲೆ ಮಾರ್ಕೆಟ್ ಪೊಲೀಸ್ ಇನ್ಸ್ಪೆಕ್ಟರ್ ಯಾವುದೇ ಕ್ರಮ ಕೈಗೊಂಡಿಲ್ಲ.

ಮಾರ್ವಾಡಿ ಬಾಬುಲಾಲ್ ಮಹಿಳೆ ಸೀರೆ ಕದ್ದಿದ್ದಾಳೆ ಅಂತ ಮೊದಲು ಹೇಳುತ್ತಾನೆ. ಆಮೇಲೆ 50,000 ಕದ್ದಿದ್ದಾಳೆ ಅಂತ ಹೇಳುತ್ತಾನೆ, ನೋಡಿದರೆ ಆತ ಆಕೆಗೆ ಒದೆಯುತ್ತಾನೆ ಎಳೆಯುತ್ತಾನೆ ಜೊತೆಗೆ ಆತನ ಮಾರ್ವಾಡಿ ರೌಡಿಗಳ ಗುಂಪು ಆ ಮಹಿಳೆಗೆ ಎಳೆದಾಡುತ್ತದೆ. ಮಾರ್ಕೆಟ್ ಪೊಲೀಸ್ ಇನ್ಸ್ಪೆಕ್ಟರ್​ಗೆ ಈ ವಿಡಿಯೋ ಕೊಟ್ಟರೆ ಎತ್ತಿ ಬಿಸಾಕುತ್ತಾರೆ. ಬದಲಿಗೆ ಆ ಮಹಿಳೆಯನ್ನೇ ಅರೆಸ್ಟ್ ಮಾಡಿ ಜೈಲಿಗೆ ಕಳಿಸುತ್ತಾರೆ ಇದಕ್ಕೆ 2, ಲಂಚ ಕೂಡ ತೆಗೆದುಕೊಳ್ಳುತ್ತಾರೆ.

ಅವೆನ್ಯೂ ರಸ್ತೆಯಲ್ಲಿ ಮಾರ್ವಾಡಿಗಳ ರೌಡಿಸಂ ಹೆಚ್ಚಾಗಿದೆ. ಅಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ. ಈ ವಿಡಿಯೋ ನೋಡಿದ ಮೇಲೆ ಗೃಹ ಮಂತ್ರಿಗಳೇ, ಮಹಿಳಾ ಆಯೋಗದ ಅಧ್ಯಕ್ಷರೇ ನೀವೇ ಖುದ್ದಾಗಿ ಮಾರ್ಕೆಟಿಂಗ್ ಇನ್​​ಸ್ಪೆಕ್ಟರ್​ನ ಸಸ್ಪೆಂಡ್ ಮಾಡಿ. ಈ ಮಾರ್ವಾಡಿ ಗ್ಯಾಂಗ್ ಅಂದು ಅಲ್ಲಿ ನಿಂತಿದ್ದ ಎಲ್ಲರನ್ನೂ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿ. ಯಾವ ಕಾನೂನಿನಲ್ಲಿ ಇಂತಹ ವಯಸ್ಸಾದ ಅಮಾಯಕ ಮಹಿಳೆಗೆ ಈ ರೀತಿ ಒದೆಯಬಹುದು ಎಳೆದಾಡಬಹುದು ಒಡೆಯಬಹುದು ಎಂದು ಇದೆ ತಿಳಿಸಿ, ಏನು ನಡೆಯುತ್ತಿದೆ.

ಗೃಹ ಸಚಿವ ಜಿ. ಪರಮೇಶ್ವರ್
ಗೃಹ ಸಚಿವ ಜಿ. ಪರಮೇಶ್ವರ್
ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ
ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ

ಇದನ್ನೂ ಓದಿ : ಸೆಟ್ಟೇರಿತು ಟಕ್ಕರ್ ಮನೋಜ್ ನಟನೆಯ ‘ಗಾರ್ಡನ್’ ಸಿನಿಮಾ – ಶುಭಕೋರಿದ ದಿನಕರ್ ತೂಗುದೀಪ!

Btv Kannada
Author: Btv Kannada

Read More