ಬಿಸಿಲು ಬೀಳ್ತಿಲ್ಲ, ವಾಕಿಂಗ್ ಹೋಗಲು ಜಾಗ ಇಲ್ಲ.. ಸ್ಕಿನ್ ಅಲರ್ಜಿ ಆಗಿದೆ – ಜಡ್ಜ್ ಮುಂದೆ ನಟ ದರ್ಶನ್ ಅಳಲು!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್ ಸೇರಿದಂತೆ ಉಳಿದ ಅರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. 57ನೇ ಸೆಷನ್ಸ್ ಕೋರ್ಟ್ ಜಡ್ಜ್ ಇಲ್ಲದ ಕಾರಣ ಇಂದು ಆರೋಪಿಗಳನ್ನು 64ನೇ ಸೆಷನ್ಸ್ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲಾಗಿತ್ತು, ಈ ವೇಳೆ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ಸೌಲಭ್ಯ ಕೊಡ್ತಿಲ್ಲ ಎಂದು ದರ್ಶನ್ ಆರೋಪ ಮಾಡಿದ್ದಾರೆ.

ಕೋರ್ಟ್ ಹೇಳಿದಂತೆ ನನಗೆ ಜೈಲಿನಲ್ಲಿ ಯಾವ ಸೌಲಭ್ಯವನ್ನು ಕಲ್ಪಿಸಿಲ್ಲ. ನೀವು ಹೇಳಿದಂತೆ, ವಾಕಿಂಗ್​ಗೆ ಕೂಡ ಅವಕಾಶ ಕೊಟ್ಟಿಲ್ಲ. ಏನೂ ಸೌಲಭ್ಯ ಕೊಟ್ಟಿಲ್ಲ ಸರ್.. ವಾಕ್ ಕೂಡ ನೀವು ಹೇಳಿದ್ರಿ ಅದು ಕೂಡ 15 ಅಡಿ ಇರೋ ಜಾಗದಲ್ಲಿ ವಾಕ್ ಮಾಡಿಸ್ತಾರೆ. ಅಲ್ಲಿ ಬಿಸಿಲು ಬರೋದಿಲ್ಲ ಸರ್ ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ.

ಕೋರ್ಟ್ ಆದೇಶವಿದ್ರೂ ಯಾವುದೇ ಸೌಲಭ್ಯವನ್ನ ನೀಡಿಲ್ಲ, ಇದು ಗೂಂಡಾರಾಜ್ಯವಾ..? ಎಂದು ದರ್ಶನ್ ಪರ ವಕೀಲ ಸುನೀಲ್ ವಾದ ಮಂಡಿಸಿದ್ದಾರೆ. ವಿಡಿಯೋ ಕಾನ್ಪರೆನ್ಸ್ ಮೂಲಕ ನಟಿ ಹಾಗೂ ಕೇಸ್‌ನ ಆರೋಪಿ ಪವಿತ್ರಾಗೌಡ ಕೂಡ ವಿಚಾರಣೆಗೆ ಹಾಜರಾಗಿದ್ದರು. ಕೊನೆಗೆ ಅ.9ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್ ಆದೇಶ ನೀಡಿದೆ.

ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ ಹಿಂದಿ ಭಾಷೆ ಹೇರಿಕೆಗೆ ಸಭೆ – ಧರ್ಮಣ್ಣ ನೇತೃತ್ವದಲ್ಲಿ ತಾಜ್ ವೆಸ್ಟೆಂಡ್ ಹೋಟೆಲ್​ಗೆ ನುಗ್ಗಿದ ಕರವೇ ಕಾರ್ಯಕರ್ತರು!

Btv Kannada
Author: Btv Kannada

Read More