500 ಕೋಟಿ ಸರ್ಕಾರಿ ಭೂಮಿ ಕಬಳಿಸಿದ ರೆವಿನ್ಯೂ ಇನ್ಸ್​​​ಪೆಕ್ಟರ್​ ​ಸಂದೀಪ್ ಸಿಂಗ್ ಜೈಲು ಪಾಲು!

ಬೆಂಗಳೂರು : ಬಿಟಿವಿಯ ನಿರಂತರ ವರದಿಯ ಬೆನ್ನಲ್ಲೇ 500 ಕೋಟಿ ಸರ್ಕಾರಿ ಭೂಮಿ ಕಬಳಸಿದ ಪ್ರಕರಣದಲ್ಲಿ ಇಬ್ಬರು ನೌಕರರನ್ನು ಬೆಂಗಳೂರಿನ ದಕ್ಷ ಜಿಲ್ಲಾಧಿಕಾರಿ ಜಗದೀಶ್ ಅವರು ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದಾರೆ.

ಅಷ್ಟೇ ಅಲ್ಲದೇ, ನಿನ್ನೆ ಬಿಟಿವಿ 500 ಕೋಟಿ ಭೂಹಗರಣದ ಸುದ್ದಿ ಬಿತ್ತರಿಸಿದ ಕೆಲ ಹೊತ್ತಲ್ಲೇ ಎಚ್ಚೆತ್ತ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿದ್ದು, 500 ಕೋಟಿ ಬೆಲೆಬಾಳುವ ಸರ್ಕಾರಿ ಭೂಮಿ ಕಬಳಿಸಿದ ಕಿಂಗ್ ಪಿನ್ ಬಾಗಲೂರು ರೆವಿನ್ಯೂ ಇನ್ಸ್​​​ಪೆಕ್ಟರ್​ ​ಸಂದೀಪ್ ಸಿಂಗ್ ವಿರುದ್ಧ ಕೂಡಲೇ FIR ದಾಖಲಿಸಿ ಅರೆಸ್ಟ್ ಮಾಡಲು ಸೂಚನೆ ನೀಡಿದ್ದಾರೆ.

ಈ ಮೂಲಕ 500 ಕೋಟಿ ಅಕ್ರಮದ ಕಿಂಗ್ ಪಿನ್ RI ಸಂದೀಪ್ ಸಿಂಗ್ ಯಾವುದೇ ಕ್ಷಣ ಜೈಲು ಪಾಲಾಗುವ ಸಾಧ್ಯತೆಯಿದೆ. ಈಗಾಗಲೇ EDಯಲ್ಲೂ ರೆವಿನ್ಯೂ ಇನ್ಸ್​​ಪೆಕ್ಟರ್ ಸಂದೀಪ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ.

ಇನ್ನು ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತರಲು ಭ್ರಷ್ಟಾತೀಭ್ರಷ್ಟ ಸಂದೀಪ್ ಸಿಂಗ್ ಟೀಮ್ ಮಾನ್ಯ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿತ್ತು. ಆದ್ರೆ ಸಲ್ಲಿಸಿದ ಸೇಲ್​ ಡೀಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಾನ್ಯ ಸಿಟಿ ಸಿವಿಲ್ ನ್ಯಾಯಾಲಯ,​ ಸಂದೀಪ್ & ಟೀಮ್​ ಪರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಹೀಗಾಗಿ ಕೋಟಿ ಕೋಟಿ ಮೌಲ್ಯದ ಸರ್ಕಾರಿ ಕೆರೆ ಜಾಗ ಅಕ್ರಮವಾಗಿ ಮಾರಾಟ ಮಾಡಿದ ಸಂದೀಪ್ ಸಿಂಗ್ ಶೀಘ್ರ ಜೈಲು ಸೇರಲಿದ್ದಾನೆ.

ನ್ಯಾಯಾಲಯದ ಆದೇಶ ಪ್ರತಿ
ನ್ಯಾಯಾಲಯದ ಆದೇಶ ಪ್ರತಿ

ಇದನ್ನೂ ಓದಿ : ರಾಜ್ಯದ 39 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಹೆಸರು ಅಂತಿಮ.. ಇಲ್ಲಿದೆ ಸಂಪೂರ್ಣ ಪಟ್ಟಿ!

Btv Kannada
Author: Btv Kannada

Read More