ಬೆಂಗಳೂರು : ರಾಜಧಾನಿ ಬೆಂಗಳೂರಿನ ಕಾಲೇಜು ಕ್ಯಾಂಪಸ್ಗಳು, ಟೆಕ್ ಹಬ್ಗಳು, ಜನ ಕಿಕ್ಕಿರಿದು ಸೇರುವ ಬಜಾರ್ಗಳು ಮತ್ತು ವಾಸಸ್ಥಳಗಳಲ್ಲಿ ನಾಗರಿಕರು ಸುರಕ್ಷತೆಯ ಬಗ್ಗೆ ಈಗೀಗಾ ಹೊಸ ನಂಬಿಕೆ ಬೆಳೆಸಿಕೊಂಡಿದ್ದಾರೆ. ಈ ಬದಲಾವಣೆಯ ಹಿಂದಿನ ಮುಖ್ಯ ಶಕ್ತಿ ಎಂದರೇ ಅದುವೇ ಖಡಕ್ ಐಪಿಎಸ್ ಅಧಿಕಾರಿ, ಪ್ರಸ್ತುತ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿರುವ ಸೀಮಂತ್ ಕುಮಾರ್ ಸಿಂಗ್.

ಹೌದು.. ನಗರ ಪೊಲೀಸ್ ಕಮಿಷನರ್ ಆಗಿರುವ ಸೀಮಂತ್ ಕುಮಾರ್ ಸಿಂಗ್ ಅವರ ನಾಯಕತ್ವದಲ್ಲಿ, ನಗರದ ಕಾನೂನು ಮತ್ತು ಸುವ್ಯವಸ್ಥೆ ದೃಢವಾಗಿ ಬದಲಾಗಿದೆ. ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅಧಿಕಾರ ಸ್ವೀಕರಿಸಿದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿವಿಧ ಅಪರಾಧ ವಿಭಾಗಗಳಲ್ಲಿ ಇಳಿಕೆ ಕಂಡುಬಂದಿದ್ದು, ಡ್ರಗ್ಸ್ ಮಾಫಿಯಾ, ಚೈನ್ ಸ್ನಾಚಿಂಗ್, ಸಣ್ಣಪುಟ್ಟ ಕಳ್ಳತನಗಳು ಮತ್ತು ಸಾರ್ವಜನಿಕ ಗಲಭೆಗಳು ಹೀಗೆ ಎಲ್ಲಾ ರೀತಿಯ ಅಪರಾಧಗಳು ಕೃತ್ಯಗಳು ಕಡಿಮೆಯಾಗಿವೆ. ಈ ಮೂಲಕ ಕಳೆದ ಕೆಲವು ತಿಂಗಳುಗಳಲ್ಲಿ ಬೆಂಗಳೂರು ನಗರವು ಸ್ಪಷ್ಟವಾದ ಪರಿವರ್ತನೆಯನ್ನು ಕಂಡಿದೆ ಎಂದರೆ ತಪ್ಪಾಗಲಾರದು.

ಅಷ್ಟೇ ಅಲ್ಲದೇ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಆಡಳಿತದಲ್ಲಿ ಜನಕೇಂದ್ರಿತ ಪೊಲೀಸ್ ಕ್ರಮಗಳು, ಮಾದಕವಸ್ತು ವಿರೋಧಿ ಅಭಿಯಾನಗಳು, ಹಾಗೂ ನಿಷ್ಠೆಯ ಗಸ್ತು ಕಾರ್ಯಗಳು ನಗರವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುತ್ತಿವೆ. ಆಂತರಿಕವಾಗಿ ನಗರದಲ್ಲಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಜವಾಬ್ದಾರಿಯ ಸಂಸ್ಕೃತಿಯನ್ನು ರೂಪಿಸಿದ್ದಾರೆ.
![]()
ಮತ್ತೊಂದೆಡೆ ಸಿಲಿಕಾನ್ ಸಿಟಿ ಮಂದಿಯಲ್ಲಿ ಒಂದು ಸಾಮಾನ್ಯ ಭಾವನೆ ಬೆಳೆದಿದೆ. ಅದು ಏನಂದ್ರೆ, ಬೆಂಗಳೂರು ಇಷ್ಟು ವರ್ಷಗಳಲ್ಲಿ ಎಂದಿಗೂ ಇಷ್ಟು ಸುರಕ್ಷಿತವಾಗಿರಲಿಲ್ಲ ಎಂಬುವುದು. ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಆಡಳಿತವು ಜನರವ ಸುರಕ್ಷತೆಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದು, ನಗರದ ಅಗತ್ಯಗಳಿಗೆ ಕೂಡಲೇ ಸ್ಪಂದಿಸುತ್ತಿದೆ.
ಇದನ್ನೂ ಓದಿ : ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಂಬನಿ!







