ಬೆಂಗಳೂರು : ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ಬಳಿಯೇ ದೊಡ್ಡ ರಾಬರಿ ನಡೆದಿದೆ. ಈ ಸಂಬಂಧ ಒಂದೇ ದಿನದ ಅಂತರದಲ್ಲಿ ಎರಡು ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣದಲ್ಲಿಯೂ ಒಂದೇ ಸಿಮಿಲಾರಿಟಿ ಇದ್ದು, ಫಾಲೋ ಮಾಡಿಕೊಂಡು ಬಂದ ಐನಾತಿಗಳು ಹಣ ದೋಚಿ ಪರಾರಿಯಾಗಿದ್ದಾರೆ.
ಖದೀಮರು ಒಂದು ಪ್ರಕರಣದಲ್ಲಿ 2.5 ಲಕ್ಷ, ಮತ್ತೊಂದು ಪ್ರಕರಣದಲ್ಲಿ 20 ಸಾವಿರ ಹಣ ದೋಚಿದ್ದಾರೆ. ಸ್ಯಾಂಕಿಟ್ಯಾಂಕಿ ಕೆರೆ ಬಳಿಯಿಂದ ಭರತ್ ಅಹುಜಾ ಎಂಬಾತನನ್ನು ಮೂವರು ಐನಾತಿಗಳು ಆಟೋದಲ್ಲಿ ಫಾಲೋ ಮಾಡಿ ಬಂದು, ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್ ಬಳಿ ಬರುತ್ತಿದ್ದಂತೆ ಆತನ ಗಾಡಿಗೆ ಹಿಂಬದಿಯಿಂದ ಬೇಕೆಂತಲೇ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ. ಬಳಿಕ ಭರತ್ ಮೇಲೆ ಹಲ್ಲೆ ನಡೆಸಿ ಗಾಡಿಯ ಡಿಕ್ಕಿಯಲ್ಲಿದ್ದ ಆತನ ಬ್ಯಾಗ್ ಹಾಗೂ ನಗದು ಸಮೇತ ಪರಾರಿಯಾಗಿದ್ದಾರೆ. ಸದಾ ಸೆಕ್ಯೂರಿಟಿ ಇರುವ ಸ್ಥಳದಲ್ಲಿಯೇ ರಾಬರಿ ಮಾಡಿದ ಖತರ್ನಾಕ್ ಆರೋಪಿಗಳು, ಭರತ್ ಚೇರ್ ಬ್ಯೂಸಿನೆಸ್ ಮಾಡಿ ಗಳಿಸಿದನ್ನೇ ದೋಚಿದ್ದಾರೆ. ಡಿಕ್ಕಿಯಲ್ಲಿದ್ದ ಹಣ ತೆಗೆಯಲು ಪಡೆದ ಕೀಯನ್ನೂ ಆರೋಪಿಗಳು ತೆಗೆದುಕೊಂಡು ಹೋಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೂಡ ಇದೇ ಮೋಟಿವ್ ಬಳಕೆ ಮಾಡಿರುವ ಆರೋಪಿಗಳು, ಕ್ಷಮೆ ಕೇಳುವ ನೆಪದಲ್ಲಿ ಸುಲಿಗೆ ನಡೆಸಿದ್ದಾರೆ. ಸಹೋದರರು ಶಾಪಿಂಗ್ ಮುಗಿಸಿ ಬರುತ್ತಿದ್ದಾಗ ರಾಹಿಲ್ ಅಹ್ಮದ್ ಎಂಬಾತನಿಂದ ಹಣ ದೋಚಿದ್ದಾರೆ. ಹಿಂಬದಿಯಿಂದ ಬಂದು ಗಾಡಿ ಟಚ್ ಮಾಡಿದ್ದ ಆರೋಪಿಗಳು, ನಂತರ ಕ್ಷಮೆ ಕೇಳುವಂತೆ ನೆಪ ಮಾಡಿ ಏಕಾಏಕಿ ರಾಹಿಲ್ ಅಹ್ಮದ್ ಪರ್ಸ್ ಕಿತ್ತು ಪರಾರಿಯಾಗಿದ್ದಾರೆ. ಸದ್ಯ ಈ ಘಟನಾ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದೆ. ಒಂದು ದಿನದ ಅಂತರದಲ್ಲಿ ನಡೆದ ಕೃತ್ಯಗಳ ಆರೋಪಿಗಳಿಗಾಗಿ ಪೊಲೀಸರು ಸದ್ಯ ಹುಡುಕಾಟ ಮುಂದುವರೆಸಿದ್ದಾರೆ.




ಇದನ್ನೂ ಓದಿ : 100 ಕೋಟಿ ಸರದಾರ ಬಾಗಲೂರು ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್!







